Home News ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕು ಅಗತ್ಯ

ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇರಬೇಕು ಅಗತ್ಯ

0
Sidlaghatta Taluk High School Co-Teachers' Association and Headmasters' Association organised a farewell function for retired BEO G. Raghunatha Reddy.

Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘಗಳ ವತಿಯಿಂದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಅವರಿಗಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಅವರು ಮಾತನಾಡಿದರು.

ಎಲ್ಲಾ ಸರ್ಕಾರಿ ನೌಕರರಲ್ಲಿ ಪ್ರಾಮಾಣಿಕತೆ, ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಯಾವುದೇ ಅನುಮಾನಗಳಿಗೆ ಆಸ್ಪದವಿರುವುದಿಲ್ಲ. ಉತ್ತಮ ಸೇವೆ ಸಲ್ಲಿಸಿದರೆ ಮಾತ್ರ ನಿವೃತ್ತಿಯ ನಂತರ ದಿನಗಳಲ್ಲಿ ಮಾನಸಿಕ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ಅಧಿಕಾರದ ಅವಧಿಯಲ್ಲಿ ತಾವು ಮಾಡಿದ ಉತ್ತಮ ಸೇವೆಯೇ ನಿವೃತ್ತಿಯ ನಂತರವೂ ಎಲ್ಲರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಾಗುವುದು. ತಮ್ಮಿಂದ ಸಮಾಜಕ್ಕೆ ಆಗಬಹುದಾದ ಅನುಕೂಲಗಳನ್ನು ಪ್ರತಿಯೊಬ್ಬರೂ ನಿಸ್ವಾರ್ಥ ಮನೋಭಾವದಿಂದ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಜಿ.ರಘುನಾಥರೆಡ್ಡಿ ಅವರು ಎರಡು ಭಾರಿ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿನ ಶಿಕ್ಷಕಸ್ನೇಹಿ, ಶಿಕ್ಷಣ ಸ್ನೇಹಿ ಗುಣಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ ಮಾತನಾಡಿ, ಪ್ರತಿಯೊಬ್ಬ ನೌಕರರೂ ತಾವು ಸಲ್ಲಿಸುತ್ತಿರುವ ಸೇವೆಯಲ್ಲಿ ವೃತ್ತಿಬದ್ಧತೆ, ಸಮಯಪ್ರಜ್ಞೆ, ತನ್ನ ಸಹವರ್ತಿಗಳೊಂದಿಗೆ ಸ್ನೇಹ, ಪ್ರೀತಿ, ಕ್ಷಮಾಗುಣಗಳನ್ನು ರೂಡಿಸಿಕೊಂಡಾಗ ಮಾತ್ರ ಉತ್ತಮಸೇವೆ ನೀಡಲು ಸಾಧ್ಯವಿದೆ. ಕ್ಷೇತ್ರದಲ್ಲಿ ಎರಡು ಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ತಾವೆಲ್ಲರೂ ನೀಡಿದ ಸಹಕಾರ ಎಂದೂ ಮರೆಯಲಾಗುವುದಿಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಉತ್ತಮವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಜಿ.ರಘುನಾಥರೆಡ್ಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ಶಿಕ್ಷಣ ಸಂಯೋಜಕ ಭಾಸ್ಕರಗೌಡ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಶಿಕ್ಷಣ ಸಂಯೋಜಕಿ ಪರಿಮಳಾ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಗೋಪಾಲಕೃಷ್ಣ, ಸಹಕಾರ್ಯದರ್ಶಿ ಶಿವಕುಮಾರ್, ತಾಲ್ಲೂಕು ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್, ಬಿಆರ್‌ಸಿ ಕೋಆರ್ಡಿನೇಟರ್ ತ್ಯಾಗರಾಜು, ಸಿಆರ್‌ಪಿ ಪ್ರಭಾಕರ್, ತಾಲ್ಲೂಕಿನ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.


Retired BEO G. Raghunatha Reddy Honoured at Farewell Function

Sidlaghatta : The Taluk High School Headmasters’ Association and Taluk High School Co-Teachers’ Associations organised a farewell function for retired field education officer G. Raghunatha Reddy at the Government High School in the city. At the event, in-charge field education officer Anjaneya praised Reddy’s good service during his tenure, which he believes will remain in everyone’s mind even after his retirement.

Addressing the gathering, Anjaneya emphasized the importance of serving the society with a selfless attitude and cultivating professionalism, punctuality, friendship, love, and forgiveness with colleagues. Taluk High School Co-Teachers’ Association President LV Venkatreddy also commended Reddy for his teacher-friendly and education-friendly qualities, which should serve as an ideal for everyone.

Retired BEO G. Raghunatha Reddy expressed his gratitude towards all the teachers and staff he worked with during his tenure. He also stressed the need for government employees to work with honesty and transparency to eliminate doubts and provide good service.

Various education coordinators, teachers, and association presidents from the district and taluk were present at the event, including Government Employees Association Taluk President KN Subbareddy, District High School Head Teachers Association Vice President Baira Reddy, and Taluk High School Associate Teachers Association Association President Sivashankar.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version