Sidlaghatta : ಕನ್ನಡ ಚಿತ್ರರಂಗದ ಖ್ಯಾತ ನಟ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಭಾನುವಾರ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬೃಹತ್ ಫ್ಲೆಕ್ಸ್ ಹಾಕಿ ಅದಕ್ಕೆ ಹೂಮಾಲೆ ಹಾಕಿ, ಅನ್ನಸಂತರ್ಪಣೆ ಮಾಡಿ ನೆಚ್ಚಿನ ನಟನನ್ನು ಸ್ಮರಿಸಿದರು.
ನಗರದ ಉಲ್ಲೂರುಪೇಟೆ ಬಳಿಯ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಸ್ನೇಹ ಯುವಕರ ಸಂಘದ ವತಿಯಿಂದ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಹಾರ ಹಾಕಿ, ಪೂಜೆ ಸಲ್ಲಿಸಿದರು. ಸಂಘದ ವತಿಯಿಂದ ಎಲ್ಲರಿಗೂ ಸಿಹಿ ಹಂಚುವ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಲಾಯಿತು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್ ಮಾತನಾಡಿ, “ಕನ್ನಡ ಸಿನಿಮಾರಂಗದ ಮೇರು ಪ್ರತಿಭೆ ಅಪ್ಪು ಅವರ ಸಮಾಜ ಮುಖಿ ಚಿಂತನೆ ಎಲ್ಲರಿಗೂ ಮಾದರಿ ಯಾಗಿದೆ. ಅಪ್ಪು ಅವರ ನೆನಪಿನಲ್ಲಿ ಈ ವರ್ಷ ಕೆಲವು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿಕೊಂಡಿದ್ದೇವೆ” ಎಂದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್, ಶೇಖರ್, ಶ್ರೀನಿವಾಸ್, ನವೀನ್, ಉದಯ್, ಮುನಿರಾಜು, ಅಶೋಕ್, ಚಂದು, ಮುಖೇಶ್, ಶ್ರೀಧರ್, ಮಧು, ಟಿ.ಕೆ.ಬಾಬು, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕನ್ನಡ ಸಂಘದ ರಾಮಾಂಜಿ, ರೈತ ಸಂಘದ ಪ್ರತೀಶ್, ನಗರಸಭಾ ಸದಸ್ಯ ಮಂಜುನಾಥ್, ವಾಸವಿ ವಿದ್ಯಾಸಂಸ್ಥೆಯ ರೂಪಸಿ ರಮೇಶ್ ಹಾಜರಿದ್ದರು.