Home News ಪೊಲೀಸರ ತನಿಖೆಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಪೊಲೀಸರ ತನಿಖೆಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

0
Sidlaghatta Suicide Death Theft Police Investigation

ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಹಾಗೂ ದೂರುದಾರರ ವಿಚಾರಣೆಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವೆಂಕಟೇಶ್‌ಬಾಬು ಚಿಕಿತ್ಸೆ ಫಲಕಾರಿಯಾಗದೆ  ಭಾನುವಾರ ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ನಗರದ ಕುರುಬರ ಪೇಟೆಯ ವಾಸಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ವೆಂಕಟೇಶ್‌ಬಾಬು ವಿಷ ಸೇವಿಸಿ ಅಸ್ವಸ್ಥನಾಗಿದ್ದ. ಐದು ದಿನಗಳಿಂದಲೂ ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶನಿವಾರ ವಿಕ್ಟೋರಿಯಾಗೆ ದಾಖಲಾಗಿದ್ದು ಅಲ್ಲಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾನೆ.

ನಗರದ ವಾಸವಿ ರಸ್ತೆಯ ಲಕ್ಷ್ಮಿ ಮೆಡಿಕಲ್ ಸ್ಟೋರ್‌ನ ಮಾಲೀಕ ಬಾಬು ಅವರ ಮನೆಯಲ್ಲಿ ಮೃತ ವೆಂಕಟೇಶ್‌ನ ಪತ್ನಿ ಪ್ರಮೀಳ ಮನೆಕೆಲಸ ಮಾಡುತ್ತಿದ್ದಳು. ಲಾಕ್‌ಡೌನ್ ಮುಗಿದು ಶಾಲೆ ಆರಂಭವಾದ ಮೇಲೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಿರುವ ಕಾರಣ ಮನೆ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಕೆಲಸ ಬಿಟ್ಟಿದ್ದಳು.

ಕೆಲಸ ಬಿಟ್ಟ ಹತ್ತು ದಿನಗಳ ನಂತರ ಮನೆ ಮಾಲೀಕ ಬಾಬು ಮಗುವಿನ ಚಿನ್ನದ ಸರ ಕಳೆದಿದೆ ಎಂದು ನಗರ ಠಾಣೆಯಲ್ಲಿ ಮೌಖಿಕವಾಗಿ ದೂರು ನೀಡಿದ್ದರು.

ಅಪರಾಧ ವಿಭಾಗದ ಎಸ್‌ಐ ಪದ್ಮಾವತಿ ಪ್ರಮೀಳ ಹಾಗೂ ಆಕೆಯ ಗಂಡ ವೆಂಕಟೇಶ್‌ಬಾಬುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಚಿನ್ನದ ಸರ ಕದ್ದಿದ್ದು ನೀನೆ ಅದಕ್ಕಾಗಿ ಚಿನ್ನದ ಸರದ ಬದಲಿಗೆ ಪ್ರತಿ ತಿಂಗಳು 10  ಸಾವಿರ ಹಣ ಕೊಟ್ಟು ಬಿಡು. ಇಲ್ಲವಾದರೆ ಕಳ್ಳತನ ಕೇಸು ಬಿದ್ದರೆ ನಿನ್ನ ಹೆಂಡತಿ ಹಾಗೂ ನಿನ್ನ ಹೆಂಡತಿಗೆ ಸಹಕರಿಸಿದ್ದ ಕಾರಣಕ್ಕೆ ನೀನು ಇಬ್ಬರೂ ಜೈಲಿಗೆ ಹೋಗುತ್ತೀರಿ ಎಂದು ಬೆದರಿಸಿದ್ದರು ಎಂದು ವೆಂಕಟೇಶ್‌ಬಾಬು ದೂರಿದ್ದ.

ಇಷ್ಟೆ ಅಲ್ಲದೆ ದೂರುದಾರ ಬಾಬು ಹಾಗೂ ಆತನ ಕುಟುಂಬದ ಕೆಲವರು ವೆಂಕಟೇಶ್‌ಬಾಬು ಮನೆ ಬಳಿ ಹೋಗಿ ಚಿನ್ನದ ಸರದ ಹಣ ಕಟ್ಟಿಕೊಡು ಎಂದು ತಾಕೀತು ಮಾಡಿದ್ದರೆನ್ನಲಾಗಿದೆ. ಐದಾರು ಬಾರಿ ಠಾಣೆಗೆ ವಿಚಾರಣೆಗಾಗಿ ಕರೆಸಿಕೊಂಡಿದ್ದಾರೆ. ಇದರಿಂದ ಹೆದರಿದ ವೆಂಕಟೇಶ್ ಅಕ್ಟೋಬರ್ 3 ರಂದು ವಿಷ ಸೇವಿಸಿದ್ದ ಎನ್ನಲಾಗಿದೆ.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version