Sidlaghatta : ಶಿಡ್ಲಘಟ್ಟ ಭೂ ಅಭಿವೃದ್ದಿ ಬ್ಯಾಂಕ್‌ನ ಅಧ್ಯಕ್ಷರಾಗಿ ದಿಬ್ಬೂರಹಳ್ಳಿ ಕ್ಷೇತ್ರದ ಡಿ.ಸಿ.ರಾಮಚಂದ್ರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಈ ಹಿಂದಿನ ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.
ಭೂ ಅಭಿವೃದ್ದಿ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಸಿ.ರಾಮಚಂದ್ರ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಘೋಷಿಸಲಾಯಿತು.
ಒಟ್ಟು 14 ಸ್ಥಾನಗಳ ಸಂಖ್ಯಾ ಬಲವಿರುವ ಬ್ಯಾಂಕ್‌ನಲ್ಲಿ 9 ಮಂದಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಹಾಗೂ 5 ಮಂದಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿದ್ದಾರೆ.
2020 ರಿಂದ 2025 ರವರೆಗಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಜೆಡಿಎಸ್ ಬೆಂಬಲಿತ ಅಬ್ಲೂಡು ಕ್ಷೇತ್ರದ ಸಿ.ಕೆ.ನಾರಾಯಣಸ್ವಾಮಿ ಅವರು ತಮ್ಮ ಪಕ್ಷದಲ್ಲಿನ ಆಂತರಿಕ ತೀರ್ಮಾನದಂತೆ ಕಳೆದ ತಿಂಗಳು ರಾಜೀನಾಮೆ ಸಲ್ಲಿಸಿದ್ದರು.
ಇನ್ನುಳಿದ ಸುಮಾರು 15 ತಿಂಗಳ ಅವಧಿಗೆ ಡಿ.ಸಿ.ರಾಮಚಂದ್ರ ಅವರು ಅಧ್ಯಕ್ಷರಾಗಿರಲಿದ್ದು ಉಪಾಧ್ಯಕ್ಷರಾಗಿ ನಲ್ಲಪನಹಳ್ಳಿಯ ನಾರಾಯಣಪ್ಪ ಅವರೆ ಮುಂದುವರೆದಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಅಧಿಕಾರಿ ಮಂಜುನಾಥ್ ಕಾರ್ಯನಿರ್ವಹಿಸಿದರು.
ಬ್ಯಾಂಕ್‌ನ ಉಪಾಧ್ಯಕ್ಷ ನಾರಾಯಣಪ್ಪ, ಮಾಜಿ ಅಧ್ಯಕ್ಷರಾದ ಸಿ.ಕೆ.ನಾರಾಯಣಸ್ವಾಮಿ, ಬಂಕ್ ಮುನಿಯಪ್ಪ, ಡಿ.ವಿ.ವೆಂಕಟೇಶ್, ಮಾದೇನಹಳ್ಳಿ ರವಿ, ಭೀಮೇಶ್, ಮುರಳಿ, ವ್ಯವಸ್ಥಾಪಕ ಕೃಷ್ಣನ್ ಹಾಜರಿದ್ದರು.