Home News ಆಹಾರ ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹ

ಆಹಾರ ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಆಗ್ರಹ

0
Umesh Katti Protest resignation NSUI Sidlaghatta

ಆಹಾರ ಸಚಿವ ಉಮೇಶ್ ಕತ್ತಿ ಅವರ ಭಾವಚಿತ್ರವನ್ನು ಹಿಡಿದು ಹಾಗೂ ಧಿಕ್ಕಾರಗಳನ್ನು ಬರೆದಿರುವ ಪೋಸ್ಟರ್ ಗಳನ್ನು ಹಿಡಿದು ಯುವಕರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಎನ್ ಎಸ್ ಯು ಐ ಸಂಘಟನೆಯ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮೌನವಾಗಿ ಪ್ರತಿಭಟಿಸಿದರು.

 ಇಡೀ ದೇಶದಲ್ಲಿ ಕೊರೊನಾದಿಂದಾಗಿ ಜನ ಸಾಯುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಈ ರಾಜ್ಯದಲ್ಲಿ ಪಡಿತರರಿಗೆ ನೀಡುತ್ತಿರುವಂಥ 5ಕೆಜಿ ಅಕ್ಕಿಯನ್ನು 2ಕೆಜಿ ಇಳಿಸಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ದೂರವಾಣಿ ಮುಖಾಂತರ ಸಚಿವರ  ಜತೆ ಮಾತನಾಡುತ್ತ ಇರುವಂತ ಸಂದರ್ಭದಲ್ಲಿ ರೈತನ ಜೊತೆ ಅವಹೇಳನವಾಗಿ ಮಾತನಾಡಿರುವುದು ಇಡೀ ದೇಶದ ರೈತರಿಗೆ ಮಾಡಿದ ಅವಮಾನವಾಗಿದೆ. ತಕ್ಷಣ ಆ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಎನ್ ಎಸ್ ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಗ್ರಾಮದ ಭಾಸ್ಕರ್, ಆನಂದ್, ಮುರಳಿ, ಕೇಶವ, ರಾಮ ಚಂದ್ರ, ದೇವರಾಜ್, ಪಾಪಣ್ಣ, ಮುನಿರಾಜು, ಪ್ರಮೋದ್ ಹಾಜರಿದ್ದರು

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version