Muttur, Sidlaghatta: ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ನಾರಾಯಣರೆಡ್ಡಿ ಅವರ ದ್ರಾಕ್ಷಿ ತೋಟದಲ್ಲಿ ಚೆನ್ನಾಗಿ ಬೆಳೆದಿದ್ದ 150 ಗಿಡಗಳನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಕತ್ತರಿಸಿಹಾಕಿದ್ದಾರೆ. ಲಕ್ಷಾಂತರ ರೂಗಳ ಬೆಳೆ ನಾಶವಾಗಿರುವ ಸಂಬಂಧವಾಗಿ ನಾರಾಯಣರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
“ನಮ್ಮ ಮುತ್ತೂರು ಗ್ರಾಮದ ಸರ್ವೆ ನಂ 309/3 ರಲ್ಲಿ ಹದಿಮೂರು ಕಾಲು ಗುಂಟೆ ಜಮೀನನ್ನು ಖರೀದಿ ಮಾಡಿಕೊಂಡಿದ್ದು, ಆ ಸಮಯದಲ್ಲಿ ನನ್ನ ಅಣ್ಣನಾದ ನಾಗರಾಜ್ ರವರ ಹೆಸರಿನಲ್ಲಿ ನೊಂದಣಿ ಮಾಡಿಸಿರುತ್ತೇವೆ. ನಂತರ 2021 ರಲ್ಲಿ ನಾನು ಮತ್ತು ನನ್ನ ಅಣ್ಣ ಬೇರೆ ಬೇರೆಯಾಗಿದ್ದು, ಆ ಸಮಯದಲ್ಲಿ ನಮ್ಮ ಕುಟುಂಬದ ಹಾಗೂ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ಈ ಜಮೀನನ್ನು ನನ್ನ ಭಾಗಕ್ಕೆ ಕೊಟ್ಟಿರುತ್ತಾರೆ. ಹೀಗಿರುವಾಗ ಶುಕ್ರವಾರ ರಾತ್ರಿ ನನ್ನ ಅಣ್ಣನಾದ ನಾಗರಾಜ್, ಆತನ ಹೆಂಡತಿ ಅನಸೂಯಮ್ಮ ಮತ್ತು ಆತನ ಮಗನಾದ ಮನೋಜ್ ಕುಮಾರ್ ಬಿನ್ ನಾಗರಾಜ್ ರವರು ಈ ಜಮೀನಿನಲ್ಲಿ ನಾನು ಬೆಳೆದಿದ್ದ ಸುಮಾರು 150 ದಾಕ್ಷಿ ಗಿಡಗಳನ್ನು ದಾಕ್ಷಿ ಗಿಡಗಳನ್ನು ಕಟಾವು ಮಾಡಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಅವರು ಈ ಜಮೀನು ನಮ್ಮದು ನೀವು ಈ ಜಮೀನಿನಲ್ಲಿ ಬೇಸಾಯ ಮಾಡಬಾರದು ಎಂದು ಗಲಾಟೆ ಮಾಡಿದ್ದಾರೆ. ಈಗ ನಮಗೆ ನ್ಯಾಯ ದೊರಕಿಸಿಕೊಡಿ” ಎಂದು ನಾರಾಯಣರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.