ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್ ಕುಮಾರ್ ಮೇಲೆ ಪುರಸಭೆ ಸದಸ್ಯ ಆನಂದ್ ಟೈಗರ್ ಹಲ್ಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿ ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿಯನ್ನು ಗುರುವಾರ ಸಲ್ಲಿಸಿದರು.
ನಗರಸಭೆಯ ನಿಷ್ಠಾವಂತ ಅಧಿಕಾರಿ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕಾನೂನಿನ ರೀತಿ ಶಿಕ್ಷೆ ಆಗಬೇಕು. ಅಲ್ಲದೆ ಆನಂದ್ ಟೈಗರ್ ಕಾನೂನು ಬಾಹಿರ ಬಿಲ್ಲುಗಳಿಗೆ ಸಹಿ ಹಾಕಲು ಒತ್ತಡ ಹಾಕುತ್ತಿದ್ದ. ದೌರ್ಜನ್ಯದಿಂದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ. ಐ.ಪಿ.ಸಿ. ಸೆಕ್ಷನ್ 307, 355, 341, 504, 506 ಮತ್ತು 332 ಪ್ರಕಾರ ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತ್ಯಾಗರಾಜು, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಜಿಲ್ಲಾಧ್ಯಕ್ಷ ಮುರಳಿ, ತಾಲ್ಲೂಕು ಶಾಖೆ ಅಧ್ಯಕ್ಷ ಮಂಜು ಕುಮಾರ್, ಗೌರವಾಧ್ಯಕ್ಷ ಸಿ.ಎನ್ ವೆಂಕಟೇಶ್, ಉಪಾಧ್ಯಕ್ಷ ಕುಮಾರ್, ನಗರ ಸಭೆ ಸಿಬ್ಬಂದಿ ಎನ್. ನಾಗರಾಜ್, ಶಿವಶಂಕರ್, ಮಂಜುನಾಥ್, ಮುನಿಕೃಷ್ಣ, ವಿ.ಆರ್ ವೆಂಕಟೇಶ್, ಅಮರ್ ಹಾಜರಿದ್ದರು