Home News ಎರಡನೇ ಬಾರಿಗೆ ರದ್ದಾದ ಶಿಡ್ಲಘಟ್ಟ ನಗರಸಭೆಯ ವಿಶೇಷ ಸಾಮಾನ್ಯ ಸಭೆ

ಎರಡನೇ ಬಾರಿಗೆ ರದ್ದಾದ ಶಿಡ್ಲಘಟ್ಟ ನಗರಸಭೆಯ ವಿಶೇಷ ಸಾಮಾನ್ಯ ಸಭೆ

Municipal Council's Special General Meeting Abruptly Postponed

0
Sidlaghatta Municipal Council's Special General Meeting Abruptly Postponed

Sidlaghatta : ಸೋಮವಾರ ಕರೆದಿದ್ದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್ ಅವರ ಸೂಚನೆಯಂತೆ ದಿಢೀರ್ ರದ್ದುಗೊಳಿಸಲಾಯಿತು. ಎರಡನೇ ಭಾರಿಗೆ ವಿಶೇಷ ಸಾಮಾನ್ಯ ಸಭೆಯನ್ನು ಮುಂದೂಡಿದ ಬಗ್ಗೆ ನಗರಸಭೆ ಸದಸ್ಯರಷ್ಟೆ ಅಲ್ಲ ಸಾರ್ವಜನಿಕ ವಲಯದಲ್ಲೂ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕಳೆದ ಫೆ.24 ರಂದು ಕರೆದಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಸುಮಿತ್ರರಮೇಶ್ ಅವರು ಅವರ ಕುಟುಂಬದ ಯಾರಿಗೋ ಆರೋಗ್ಯ ಸರಿಯಿಲ್ಲ ಎನ್ನುವ ಕಾರಣಕ್ಕೆ ಸಭೆಯನ್ನು ಮುಂದೂಡಿ ಮಾ.20 ರಂದು ಇಂದು ನಿಗಪಡಿಸಲಾಗಿತ್ತು.

ಆದರೆ ಇಂದು ಸಹ ಸಭೆಯನ್ನು ದಿಢೀರ್ ಎಂದು ಮುಂದೂಡಿದ್ದು ಸಭೆಗೆ ಆಗಮಿಸಿದ್ದ ಉಪಾಧ್ಯಕ್ಷ ಸೇರಿದಂತೆ 20 ಕ್ಕೂ ಹೆಚ್ಚು ನಗರಸಭೆ ಸದಸ್ಯರು ಕಾದು ಕಾದು ವಾಪಸ್ ಹೋಗುವಂತಾಯಿತು. ಬೆಳಗ್ಗೆ 10.15ಕ್ಕೆ ಸಭೆ ನಿಗಯಾಗಿದ್ದು 10 ಗಂಟೆಗೆಲ್ಲಾ ಬಹುತೇಕ ಸದಸ್ಯರು, ಪೌರಾಯುಕ್ತರು, ಅಕಾರಿಗಳು, ಸಿಬ್ಬಂದಿ ಸಭಾಂಗಣದಲ್ಲಿ ಹಾಜರಿದ್ದರು.

ಆದರೆ ಅಧ್ಯಕ್ಷೆ ಸುಮಿತ್ರರಮೇಶ್ ಅವರು ಸಭೆಯನ್ನು ಮುಂದೂಡಿ ಎಂದು ಪೌರಾಯುಕ್ತ ಆರ್.ಶ್ರೀಕಾಂತ್ ಅವರಿಗೆ ನೀಡಿದ ಸೂಚನೆಯಂತೆ ಸಭಾಂಗಣಕ್ಕೆ ಆಗಮಿಸಿದ ಪೌರಾಯುಕ್ತ ಆರ್.ಶ್ರೀಕಾಂತ್ ಅವರು ಸಭೆಯನ್ನು ಮುಂದೂಡಿರುವುದಾಗಿ ಪ್ರಕಟಿಸಿದರು.

ಸಭೆ ಮುಂದೂಡುವುದಾಗಿ ಪ್ರಕಟಿಸಿದ ಪೌರಾಯುಕ್ತರ ವಿರುದ್ದ ಸಭೆಗೆ ಆಗಮಿಸಿದ್ದ ಎಲ್ಲ ಸದಸ್ಯರು ಮುಗಿಬಿದ್ದರು. ಸಭೆಯನ್ನು ಏಕೆ ಮುಂದೂಡುತ್ತಿದ್ದೀರಿ, ಕಳೆದ ಫೆ.24ರಂದು ಕರೆದಿದ್ದ ಸಭೆಯನ್ನು ಇದೆ ರೀತಿ ಮುಂದೂಡಿ ಇಂದು ನಿಗಪಡಿಸಿ ಇಂದಿನ ಸಭೆಯನ್ನೂ ಸಹ ಮುಂದೂಡುತ್ತಿದ್ದೀರಿ ನಿಮ್ಮ ಉದ್ದೇಶವಾದರು ಏನು ಎಂದು ಪ್ರಶ್ನಿಸಿದರು.

ನಮ್ಮ ಅನೇಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದು ಯಾರ ಬಳಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳೋದು, ಯಾರು ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಕಿಡಿಕಾರಿದರು.

ಆದರೆ ಪೌರಾಯುಕ್ತ ಶ್ರೀಕಾಂತ್ ಅವರು ಸಭೆಯನ್ನು ನಡೆಸುವುದು ಅಥವಾ ಮುಂದೂಡಲು ವಿವೇಚನಾ ಅಕಾರವನ್ನು ಹೊಂದಿದ್ದು ನಾನು ಅಧ್ಯಕ್ಷರ ಸೂಚನೆಯನ್ನಷ್ಟೆ ಪಾಲಿಸಿ ಮೇಲಕಾರಿಗಳಿಗೆ ಈ ದಿನದ ಘಟನೆಯ ವರದಿಯನ್ನು ಸಲ್ಲಿಸುತ್ತೇನಷ್ಟೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು?

ಇದು ಎರಡನೇ ಸಲ ಸಭೆಯನ್ನು ಏಕಾ ಏಕಿ ರದ್ದುಪಡಿಸಿರೋದು. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು, ಮಳೆಗಾಲ ಬೇರೆ ಶುರುವಾಗಿದೆ. ಮ್ಯಾನ್‌ಹೋಲ್‌ಗಳು ಕೆಟ್ಟಿವೆ. ಬೀದಿ ದೀಪಗಳಿಲ್ಲ, ನಮ್ಮ ವಾರ್ಡಿನಲ್ಲಿ ಕರಗ ಮಹೋತ್ಸವ ಇದೆ.
ಇದೆಲ್ಲವನ್ನೂ ನಾನು ಸಭೆಯಲ್ಲಿ ಹೇಳಿಕೊಳ್ಳಲಷ್ಟೆ ಸಾಧ್ಯ. ಸಭೆಯೆ ನಡೆಯದಿದ್ದರೆ ನಾನು ನನ್ನ ವಾರ್ಡಿನ ಜನತೆಗೆ ಉತ್ತರ ಕೊಡುವುದಾದರೂ ಏನನ್ನು, ನನ್ನ ಕಷ್ಟಗಳನ್ನು ಹೇಳಿಕೊಂಡು ಜೋರಾಗಿ ಮಾತನಾಡಿದರೆ ನಮ್ಮ ಮೇಲೆ ಅಟ್ರಾಸಿಟಿ ಕೇಸವನ್ನು ಹಾಕುತ್ತಾರೆ.
ಅಷ್ಟೆ ಅಲ್ಲ ಇದೀಗ ನನ್ನ ವಿರುದ್ದ ಗೂಂಡಾ ಕಾಯಿದೆ ಹಾಕಿ ಗಡಿಪಾರು ಮಾಡಲು ಸಿದ್ದತೆಗಳು ನಡೆದಿವೆ. ನಮ್ಮ ವಾರ್ಡಿನ ಸಮಸ್ಯೆಗಳನ್ನು ಹೇಳಿಕೊಳ್ಳುವುದೆ ತಪ್ಪಾದರೆ ಅಷ್ಟು ಮಾತ್ರಕ್ಕೆ ನಮ್ಮ ಮೇಲೆ ಅಟ್ರಾಸಿಟಿ, ಗೂಂಡಾ ಕಾಯಿದೆ ಹಾಕಿ ಗಡಿಪಾರು ಮಾಡುವುದಾದರೆ ನನಗೆ ನಗರಸಭೆ ಸದಸ್ಯತ್ವವೇ ಬೇಡ ರಾಜೀನಾಮೆ ಕೊಟ್ಟು ನಮ್ಮ ಹೆಂಡತಿ ಮಕ್ಕಳನ್ನು ದೂರ ಕರೆದುಕೊಂಡು ಹೋಗಿ ಬದುಕುತ್ತೇನೆ ನಾನು ಇಲ್ಲಿನ ಕಿರುಕುಳವನ್ನು ತಡೆದುಕೊಳ್ಳಲು ಆಗುತ್ತಿಲ್ಲ.

-ಲಕ್ಷ್ಮಣ್, ನಗರಸಭೆ ಸದಸ್ಯ.

Municipal Council’s Special General Meeting Abruptly Postponed

Sidlaghatta : The Municipal Council’s Special General Meeting, which was scheduled for March 20, has been abruptly postponed, causing dissatisfaction among councilors and the public sector. This is the second time the meeting has been canceled, and members are expressing frustration with the lack of a platform to voice their concerns.

The February 24 meeting was postponed due to the illhealth of someone in the chairperson’s family, and the meeting was rescheduled for March 20. However, the Chairperson of the Municipal Council, Sumitra Ramesh, instructed the meeting to be postponed once again.

More than 20 city council members, including the vice president, had arrived at the meeting, but were forced to leave. Members expressed their frustration with the postponement, as they had come to voice their concerns about issues in their wards, such as poor infrastructure, the rainy season, and the Karaga Mahotsava festival.

The Municipal Commissioner, R. Srikanth, expressed his helplessness, stating that he has discretion to hold or postpone the meeting and will submit a report to the policy chiefs as per the instructions of the President. Members are now left wondering who to turn to with their problems, as they fear retribution if they speak out.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version