ಶಿಡ್ಲಘಟ್ಟ ತಾಲೂಕಿನ ಅಬ್ಲೂಡು, ಕೆಂಪನಹಳ್ಳಿ, ಮಲ್ಲಹಳ್ಳಿ, ಶೆಟ್ಟಹಳ್ಳಿಯ ಸುತ್ತ ಮುತ್ತ ತ್ರಿಪ್ಸ್, ಮೈಟ್ಸ್ ಹಾಗೂ ನುಸಿ ಹಾವಳಿ ಹೆಚ್ಚಿರುವ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ, ಔಷದೋಪಚಾರದ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ನರೇಂದ್ರ ಕುಮಾರ್ ಮಾಹಿತಿ ನೀಡಿದರು.
ಮೂರು ಹಂತದಲ್ಲಿ ನಿಯಮಿತವಾಗಿ ನಿಗತ ಪ್ರಮಾಣದಲ್ಲಿ ನೀರು, ಔಷಯನ್ನು ಸಿಂಪಡಿಸುವ ಮೂಲಕ ಹಿಪ್ಪುನೇರಳೆಗೆ ಕಾಡುತ್ತಿರುವ ತ್ರಿಪ್ಸ್, ಮೈಟ್ಸ್ ಹಾಗೂ ನುಸಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಕ್ಯಾಲನೂರು ಕ್ರಾಸ್‍ನ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ನರೇಂದ್ರ ಕುಮಾರ್ ತಿಳಿಸಿದರು.
ಹಿಪ್ಪುನೇರಳೆ ಸೊಪ್ಪಿಗೆ ಇತ್ತೀಚಿನ ದಿನಗಳಲ್ಲಿ ತ್ರಿಪ್ಸ್, ಮೈಟ್ಸ್ ಹಾಗೂ ನುಸಿ ಹಾವಳಿ ಹೆಚ್ಚುತ್ತಿದೆ. ಇದರಿಂದ ಸೊಪ್ಪಿನ ಬೆಳವಣಿಗೆ ಹಾಗೂ ಇಳುವರಿ ಕುಂಠಿತಗೊಳ್ಳುತ್ತಿದೆ. ಈ ರೋಗಪೀಡಿತ ಹಿಪ್ಪುನೆರಳೆ ಸೊಪ್ಪನ್ನು ರೇಷ್ಮೆ ಹುಳುಗಳು ತಿನ್ನುವುದಿಲ್ಲ ಎಂದರು.
ಹಿಪ್ಪು ನೇರಳೆ ಸೊಪ್ಪು ಕಟಾವು ಮಾಡಿದ 15 ದಿನಗಳ ಅಂತರದಲ್ಲಿ ಮೊದಲಿಗೆ ಬರೀ ನೀರನ್ನು ಹಿಪ್ಪುನೇರಳೆ ಸೊಪ್ಪಿನ ಕೆಳಭಾಗದಲ್ಲಿ ಬಿರುಸಿನಿಂದ ಬೀಳುವಂತೆ ಸಾಧ್ಯವಾದರೆ ಗನ್ ಮೋಟಾರ್ ಬಳಸಿ ಸಿಂಪಡಿಸಬೇಕು, ಇದರಿಂದ ಅರ್ಧದಷ್ಟು ನುಸಿ ಹೇನುಗಳು ನಾಶವಾಗುತ್ತವೆ.
ನಂತರ ವಾರ ಬಿಟ್ಟು ಒಂದು ಲೀಟರ್ ನೀರಿಗೆ 3 ಎಂಎಲ್‍ನಷ್ಟು ರೋಗರ್ ಔಷಯನ್ನು ಮಿಶ್ರ ಮಾಡಿ ಸಿಂಪಡಿಸಬೇಕು, ಆ ನಂತರ ವಾರ ಬಿಟ್ಟು 0.5 ಎಂಎಲ್‍ನಷ್ಟು ಕುನೋಯಿಚಿ ಔಷಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಔಷದೋಪಚಾರ ಮಾಡಬೇಕು.
ಇದರಿಂದ ತ್ರಿಪ್ಸ್, ಮೈಟ್ಸ್ ಹಾಗೂ ನುಸಿ ನಾಶವಾಗುತ್ತದೆಯಲ್ಲದೆ ಔಷದೋಪಚಾರ ಮುಗಿದ 15 ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಕೊಡಬಹುದು ಎಂದು ವಿವರಿಸಿದರು.
ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ತಿಮ್ಮರಾಜು ಮಾತನಾಡಿ, ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಈ ನುಸಿ ಕಾಟ ಹೆಚ್ಚಲಿದೆ. ಈ ಕೀಟಗಳು ಗಾಳಿಯಲ್ಲಿ ಹರಡುವ ಕಾರಣ ಹಿಪ್ಪುನೇರಳೆ ಕಡ್ಡಿಯ ನಡುವೆ ಅಂತರ ಕಡಿಮೆ ಇರುವ ತೋಟಗಳಲ್ಲಿ ಈ ರೋಗ ಹೆಚ್ಚು ಕಾಣುತ್ತಿದೆ ಎಂದರು.
ಹಾಗಾಗಿ ಹಿಪ್ಪು ನೇರಳೆ ಕಡ್ಡಿಯನ್ನು ನಾಟಿ ಮಾಡುವಾಗ ಸಾಧ್ಯವಾದಷ್ಟು ಸಾಲಿನಿಂದ ಸಾಲಿನ ನಡುವೆ ಕನಿಷ್ಟ 5 ಅಡಿಗಳಿಗೂ ಹೆಚ್ಚು ಅಂತರ ಇರುವಂತೆ ನಾಟಿ ಮಾಡುವುದರಿಂದ ಹಿಪ್ಪು ನೇರಳೆ ತೋಟದಲ್ಲಿ ಸರಾಗವಾಗಿ ಗಾಳಿ ಬೆಳಕು ಹರಿದಾಡಿ ರೋಗಗಳು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಇಳುವರಿಯೂ ಹೆಚ್ಚು ಪಡೆಯಬಹುದೆಂದರು.
ಐಐಎಲ್‍ಎಂ ಔಷದ ಕಂಪನಿಯ ಪ್ರತಿನಿ ಶಂಕರ್ ಅವರು, ನುಸಿ ಪೀಡಿತ ತೋಟಗಳಲ್ಲಿ ಕುನೋಯಿಚಿ ಔಷ ಸಿಂಪಡಣೆ ಮಾಡುವ ಬಗೆ ಹಾಗೂ ಗಮ್ ಸ್ಟಿಕ್ ಬಳಕೆ ಬಗೆ ಹಾಗೂ ಅದರ ಉಪಯೋಗದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತಿಳಿಸಿಕೊಟ್ಟರು.
ಯಾವುದೆ ಔಷಯನ್ನು ಸಿಂಪಡಣೆ ಮಾಡಿದಾಗ ಹಿಪ್ಪು ನೇರಳೆ ಎಲೆಯ ಪೂರ್ತಿ ಭಾಗದಲ್ಲಿ ಔಷ ಸಿಂಪಡಣೆ ಆಗುವುದಿಲ್ಲ. ಅಂತಹ ಸಮಯದಲ್ಲಿ ಈ ಗಮ್‍ಸ್ಟಿಕ್ ಔಷಯನ್ನು ಎಲೆಯ ಪೂರ್ಣಭಾಗಕ್ಕೆ ಪಸರಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ರೇಷ್ಮೆ ವಿಸ್ತರಣಾಕಾರಿ ಶಾಂತರಸ, ತಾಂತ್ರಿಕ ಸಿಬ್ಬಂದಿ ಜಗದೇವಪ್ಪ ಗುಗ್ಗರಿ, ಮುನಿರಾಜು, ವೆಂಕಟರಮಣಪ್ಪ, ಐಐಎಲ್‍ಎಂ ಕಂಪನಿಯ ಶಿವರಾಜ್, ರೈತರಾದ ದೇವರಾಜ್, ಶಿವಕುಮಾರ್, ಮಧು, ನಾಗರಾಜ್, ಆವಲಪ್ಪ ಇನ್ನಿತರರು ಹಾಜರಿದ್ದರು.