Home News ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನೆಸಲಕರಣೆಗಳ ವಿತರಣೆ

ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನೆಸಲಕರಣೆಗಳ ವಿತರಣೆ

0
Mobility Instruments for Physically Disabled

Sidlaghatta : ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕಲ್ಪಿಸಬೇಕು. ವಿಕಲಚೇತನ ಮಕ್ಕಳ ಪೋಷಣೆ, ಶಿಕ್ಷಣ, ಅಭಿವೃದ್ಧಿಯಲ್ಲಿ ಪೋಷಕರ ಪಾತ್ರವು ಮಹತ್ವದ್ದು. ಪ್ಯಾರಾ ಒಲಂಪಿಕ್ಸ್‌ನಲ್ಲಿ ಭಾರತದ ಸಾಧನೆಯು ಉತ್ತಮವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.

ನಗರದ ಉಲ್ಲೂರುಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಸಮನ್ವ ಶಿಕ್ಷಣ ಕೇಂದ್ರಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನಾಚರಣೆ, ಅಲಿಂಕೋ ಯೋಜನೆಯಡಿ ಅರ್ಹ ವಿಕಲಚೇತನ ಮಕ್ಕಳಿಗೆ ಅಗತ್ಯ ಸಾಧನೆಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನೇಕ ವಿಕಲಚೇತನರು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅಂತಹ ಸಾಧಕರ ಜೀವನವು ಮಾದರಿಯಾಗಿ ಅನುಸರಿಸಿ, ಕೀಳಿರಿಮೆ ಹೊಂದದೇ ಉತ್ತಮವಾದುದುನ್ನು ಸಾಧಿಸಲು ಶ್ರಮಿಸಬೇಕು. ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಹ್ಯಾಪಿ ಹ್ಯಾಂಡ್ಸ್‌ನ ಫಾದರ್ ಬೆನೆವೆಂಚರ್‌ ಜೀ ಮಾತನಾಡಿ, ವಿಕಲಚೇತನರಲ್ಲಿ ಅಂಗನ್ಯೂನತೆಯಿದ್ದಾಗ್ಯೂ ದೇವರು ವಿಶೇಷ ಕೌಶಲಗಳನ್ನು ಸೃಷ್ಟಿಸಿರುತ್ತಾನೆ. ಅವುಗಳನ್ನು ಅರಿತು ಜಾಗೃತಗೊಳಿಸಿಕೊಂಡು ಮುನ್ನುಗ್ಗಬೇಕು. ವಿಕಲಚೇತನ ಮಕ್ಕಳ ಸಏವೆಯಲ್ಲಿಯೇ ದೈತ್ವವನ್ನು ಕಾಣಬೇಕಿದೆ ಎಂದರು.

ಬಿ.ಆರ್‌.ಸಿ ಸಮನ್ವಯಾಧಿಕಾರಿ ತ್ಯಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿನ ವಿಕಲಚೇತನಮಕ್ಕಳ ಸಮೀಕ್ಷೆ ಆಗಿದ್ದು ಎಲ್ಲಾ ಮಕ್ಕಳನ್ನೂ ಸಾಮಾನ್ಯಶಿಕ್ಷಣ, ಗೃಹಾಧಾರಿತ ಶಿಕ್ಷಣಕ್ಕೆ ಒಳಪಡಿಸಲಾಗಿದೆ. ಸರ್ಕಾರ, ಸ್ವಯಂಸೇವಾಸಂಸ್ಥೆಗಳಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನೂ ಪ್ರಾಮಾಣಿಕವಾಗಿ ಒದಗಿಸಿಕೊಟ್ಟು ಮಕ್ಕಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಿಕಲಚೇತನರ ಏಳಿಗೆಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿದೆ. ಅಷ್ಟಲ್ಲದೇ ಅನೇಕ ಸ್ವಯಂಸೇವಾಸಂಸ್ಥೆಗಳು ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದ್ದು, ತಾಲ್ಲೂಕಿನಲ್ಲಿ ಮಾದರಿಯಾಗಿ ಫಿಸಿಯೋತೆರಪಿ, ವೋಕಲ್‌ತರಬೇತಿ, ಇಂಗ್ಲೀಷ್ ಸ್ಪೀಕಿಂಗ್ ಮತ್ತು ಯೋಗ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಸಾಕಷ್ಟು ಮಂದಿ ವಿಕಲಚೇತನ ಮಕ್ಕಳ ಪ್ರಗತಿಯು ಉತ್ತಮವಾಗಿದೆ ಎಂದರು.

ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆಯ ನಿವೃತ್ತ ಆಯುಕ್ತ ರಾಜಣ್ಣ ಮಾತನಾಡಿ, ವಿಕಲಚೇತನರಿಗೆ ಒದಗಿಸಲಾಗುತ್ತಿರುವ ಸಾಧನೆ ಸಲಕರಣಗಳಿಗೆ ಹಾನಿಯಾದಾಗ ಅವುಗಳನ್ನು ರಿಪೇರಿ ಮಾಡಿಕೊಳ್ಳಲು ಬೇಕಾದ ಕ್ರಮಗಳನ್ನು ಕಲ್ಪಿಸಬೇಕಿದೆ ಎಂದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಸಿ.ಎಂ.ಮುನಿರಾಜು, ಬಿ.ಆರ್‌.ಸಿಯ ಸಮನ್ವಯಶಿಕ್ಷಣ ಸಂಪನ್ಮೂಲವ್ಯಕ್ತಿ ಬಿ.ಎಂ.ಜಗದೀಶ್, ನೇಟೀವ್ ಟ್ರೀಮ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಚಂದನ್‌ ರವಿಶಂಕರ್, ಹ್ಯಾಪಿ ಹ್ಯಾಂಡ್ಸ್ ಟ್ರಸ್ಟ್‌ ನ ಲಿಲ್ಲಿ, ಬಿ.ಆರ್‌.ಪಿ ಕೆ.ಮಂಜುನಾಥ್, ಸಿ.ಆರ್‌.ಪಿ ಪ್ರಭಾಕರ್ ಮಾತನಾಡಿದರು.

ವಿಕಲಚೇತನ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದವು. ವಿಕಲಚೇತನ ಮಕ್ಕಳಿಗೆ ಅಲಿಂಕೋ ಸಹಯೋಗದಲ್ಲಿ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸೂಚಿಸಿದ ಸುಮಾರು 75 ಮಂದಿ ವಿಕಲಚೇತನ ಮಕ್ಕಳಿಗೆ ವೀಲ್‌ ಚೇರ್, ರೊಲೇಟರ್, ಶ್ರವಣ ಸಾಧನ, ಎಲ್ಬೋ ಕ್ರಚಸ್‌ ಗಳು, ಟ್ರೈಸಿಕಲ್‌ ಗಳು, ಬ್ರೈಲ್‌ಕಿಟ್, ಎಂ.ಎಸ್‌.ಐ.ಇ.ಡಿ ಕಿಟ್‌ ಗಳು ಸೇರಿದಂತೆ ಹಲವು ಸಾಧನಾಸಲಕರಣೆಗಳನ್ನು ವಿತರಿಸಲಾಯಿತು.

ಅಂಗವಿಕಲರ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ ಐಶ್ವರ್ಯ, ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ, ಬಿಆರ್‌ಪಿ ಚಂದ್ರಕಲಾ, ನವಜೀವನ ಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ತಾಲ್ಲೂಕಿನ ಎಲ್ಲಾ ಸಿ.ಆರ್‌.ಪಿಗಳು, ಪೋಷಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version