Home News 4 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

4 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

0
Sidlaghatta MLA V. Muniyappa has expressed his disappointment with the BJP government in the state for not prioritising the development of rural areas with basic amenities such as drinking water, roads, street lights, cleanliness, and hygiene.

Devaramallur, Sidlaghatta : ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಚತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿದಾಗ ಮಾತ್ರ ಹಳ್ಳಿಗಳು ಅಭಿವೃದ್ದಿ ಆಗಲು ಸಾಧ್ಯ. ಆದರೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಅಭಿವೃದ್ದಿಗೆ ಆಧ್ಯತೆ ನೀಡುತ್ತಿಲ್ಲ ಎಂದು ಶಾಸಕ ವಿ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಹಾಗೂ ವೈ.ಹುಣಸೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷದ ಧೋರಣೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ನಾವು ಹಳ್ಳಿಗಳಲ್ಲಿ ಅಭಿವೃದ್ದಿ ಕಾಣುತ್ತಿಲ್ಲ ಎಂದರು.

ದೇವರಮಳ್ಳೂರು ಗ್ರಾಮ ಪಂಚಾಯಿತಿಯ ಬೂದಾಳ ವೀರಾಪುರ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಹ ಶಾಸಕ ವಿ.ಮುನಿಯಪ್ಪ ಭೂಮಿ ಪೂಜೆ ನೆರವೇರಿಸಿದರು.

ಬೂದಾಳ ಗ್ರಾಮದಲ್ಲಿನ ಮುಖ್ಯ ರಸ್ತೆ ಹಾಗೂ ವೀರಾಪುರ ಗ್ರಾಮದಲ್ಲಿನ ಗವಿಗುಟ್ಟ ಗಂಗಾಧರೇಶ್ವರಸ್ವಾಮಿ ದೇವಾಲಯಕ್ಕೆ ಸಿಸಿ ರಸ್ತೆಯನ್ನು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಿರಂಜನ್, ವಕೀಲ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ದ್ಯಾವಪ್ಪ, ಗುತ್ತಿಗೆದಾರ ಲಕ್ಷ್ಮೀಪತಿ, ರಾಮಣ್ಣ, ಸದಸ್ಯರಾದ ಡಿ.ವೆಂಕಟೇಶ್, ನಾಗರಾಜ್ ಹಾಜರಿದ್ದರು.


MLA V. Muniyappa Calls for Development in Rural Areas

Devaramallur, Sidlaghatta : MLA V. Muniyappa has expressed his disappointment with the BJP government in the state for not prioritising the development of rural areas. He emphasized that the key to developing villages lies in providing basic amenities such as drinking water, roads, street lights, cleanliness, and hygiene.

Muniyappa’s comments came after performing Bhoomi Puja for the construction of a cement road that will cost Rs. 4 crore in Devaramallur and Y. Hunasenahalli Gram Panchayats in Sidlaghatta Taluk.

The MLA also oversaw the Bhoomi Puja ceremony for the construction of a cement road that will cost Rs. 1 crore in Budala Veerapur village of Devaramallur Gram Panchayat. He stressed the importance of quality work being carried out in the construction of the main road in Budala village and CC road to Gavigutta Gangadhareswaraswamy temple in Veerapura village.

During the event, former taluk panchayat member Niranjan, lawyer Vishwanath, gram panchayat president Kempegowda, vice president Dyappa, contractor Lakshmipathy, Ramanna, and members D. Venkatesh and Nagaraj were also present.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version