Home News ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ – ಶಾಸಕ ವಿ.ಮುನಿಯಪ್ಪ

ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ – ಶಾಸಕ ವಿ.ಮುನಿಯಪ್ಪ

0
V muniyappa Kochimul Milk Fedaration

ಶಿಡ್ಲಘಟ್ಟ ತಾಲ್ಲೂಕಿನ ಅತ್ತಿಗಾನಹಳ್ಳಿಯ ಹಾಲು ಉತ್ಪಾದಕರ ಸಹಕಾರದ ಸಂಘದಲ್ಲಿ ಗುರುವಾರ ಹಾಲು ಕರೆಯುವ ಯಂತ್ರಗಳ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಬಯಲುಸೀಮೆಯ ಈ ಭಾಗದಲ್ಲಿ ರೇಷ್ಮೆಯ ನಂತರ ರೈತರನ್ನು ಕೈ ಹಿಡಿದಿರುವ ಉದ್ಯಮ ಎಂದರೆ ಅದು ಕೇವಲ ಹೈನುಗಾರಿಕೆ ಮಾತ್ರ. ಇಂತಹ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು  ಹೇಳಿದರು.

ಕೊರೋನಾ ಕೇವಲ ನಮ್ಮನ್ನು ಮಾತ್ರ ಕಾಡುತ್ತಿಲ್ಲ ಇಡೀ ಜಗತ್ತೇ ಇದರಿಂದ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ವಿನಾಕಾರಣ ಜನರು ಸರಕಾರದ ಮೇಲೆ ದೂರುತ್ತಾ ಕಾಲ ಹರಣ ಮಾಡುವ ಬದಲಿಗೆ ಎಲ್ಲರು ಒಗ್ಗಟ್ಟಿನಿಂದ ಕೊರೋನಾವನ್ನು ಎದುರಿಸೋಣ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಜನರು ಸರ್ಕಾರ ಸೂಚಿಸಿರುವ ಮುನ್ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ಸಂಪೂರ್ಣ ತಡೆಗಟ್ಟಲು ಸಹಕರಿಸಬೇಕು ಎಂದರು.

ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ, ಕೋಚಿಮುಲ್ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಅನಿವಾರ್ಯವಾಗಿ ಹಾಲಿನ ಧರ ೧.೫ ರೂ. ಕಡಿಮೆ ಮಾಡಲಾಗಿದೆ. ಬೇರೆಲ್ಲಾ ಕಡೆ ಕಳೆದ ಮೇ ತಿಂಗಳಿನಿAದಲೇ ಹಾಲಿನ ಧರ ಕಡಿಮೆ ಮಾಡಿದ್ದರು. ಆದರೆ ನಾವು ಈ ಬಾಗದ ರೈತರ ಹಿತದೃಷ್ಟಿಯಿಂದ ಜೂನ್ ತಿಂಗಳಲ್ಲಿ ಕಡಿಮೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಿದೂಗಿಸುತ್ತೇವೆ ಎಂದರು.

ಎಸ್.ದೇವಗಾನಹಳ್ಳಿ, ಸಾದಲಿ ಭಾಗದಲ್ಲಿ ಎರಡು ಬಿಎಂಸಿ ಕೇಂದ್ರಗಳನ್ನು ಸಧ್ಯದಲ್ಲಿಯೇ ತೆರೆಯಲಿದ್ದು ತಾಲೂಕಿನ ಬೇರೆಲ್ಲೂ ಬಿಎಂಸಿ ಕೇಂದ್ರಗಳ ಅವಶ್ಯಕತೆ ಇರುವುದಿಲ್ಲ. ತಾಲೂಕಿನ ಬಹುತೇಕ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಯೂ ಬಿಎಂಸಿ ಘಟಕಗಳಿದ್ದು ಹಾಲನ್ನು ಬಿಎಂಸಿ ಕೇಂದ್ರಗಳಲ್ಲಿಯೇ ಸಂಗ್ರಹಿಸಿ ಕೋಚಿಮುಲ್ ಗೆ ಕಳುಹಿಸಲು ಸಹಕಾರಿಯಾಗುತ್ತದೆ ಎಂದರು.

ಕೋಚಿಮುಲ್‌ನ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಚಂದ್ರಶೇಖರ್, ಮಾಜಿ ಜಿ.ಪಂ ಅಧ್ಯಕ್ಷ ಸುಬ್ರಮಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬೈರಪ್ಪ, ಕಾರ್ಯದರ್ಶಿ ಕಿರಣ್, ಮೇಲ್ವಿಚಾರಕರಾದ ಜಯಚಂದ್ರ, ಉಮೇಶ್‌ರೆಡ್ಡಿ, ನಿರ್ದೇಶಕರಾದ ಆಂಜಿನಪ್ಪ, ನಾರಾಯಣಪ್ಪ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version