![30Oct23Sd2a Sidlaghatta Meri Mati Mera Desh Amrit Kalash Yatra Reaches New Delhi](https://www.sidlaghatta.com/wp-content/uploads/2023/10/30Oct23Sd2a.jpg)
Sidlaghatta : ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ಕರ್ನಾಟಕ ವಲಯ ನೆಹರು ಯುವ ಕೇಂದ್ರ ಸಂಘಟನೆಯ ಜೊತೆಯಲ್ಲಿ ಅಮೃತ ಕಳಸ ಯಾತ್ರೆಗೆ ಹೊರಟ ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಗ್ರಾಮಗಳ ಏಳು ಮಂದಿ ಯುವಜನತೆ ನವ ದೆಹಲಿ ತಲುಪಿದ್ದಾರೆ.
ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಎನ್.ಎಸ್.ಎಸ್ ಸ್ವಯಂ ಸೇವಕ ಎಂ.ವಿ. ಮಹೇಂದ್ರ ವರ್ಮ, ಮುಗಲಡಪಿ ಗ್ರಾಮದ ಯುವ ಸ್ವಯಂಸೇವಕ ಎಂ.ಎ ರವೀಶ್, ಚಿಕ್ಕದಾಸರಹಳ್ಳಿಯ ಯುವ ಸ್ವಯಂಸೇವಕರಾದ ಎನ್.ಅರುಣ್ ಕುಮಾರ್, ಎನ್ ಮೋಹನ್, ವಿ.ಪವನ್, ಎಂ.ಅಶೋಕ್, ಹಾಗೂ ಎನ್.ರಂಜೀತ್ ಆಯ್ಕೆಯಾಗಿ ದೆಹಲಿ ತಲುಪಿದ್ದಾರೆ.
ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ಭಾರತ ಭೂಮಿಯ ಪಾವಿತ್ರ್ಯತೆ ಮತ್ತು ಯೋಧರಿಗೆ ಗೌರವ ಸೂಚಿಸುವ ರಾಷ್ಟ್ರೀಯ ಅಭಿಯಾನವಾಗಿದೆ.
ನಮ್ಮ ದೇಶಭಕ್ತಿಯನ್ನು ಪ್ರದರ್ಶಿಸುವ ಮತ್ತು ಯುವಜದಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಮತ್ತು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿನ ಅತ್ಯದ್ಭುತ ಕಾರ್ಯಕ್ರಮ ಇದಾಗಿದೆ.
“ಮಿಟ್ಟಿ ಕೋ ನಮನ್, ವೀರೋನ್ ಕಾ ವಂದನ್” ಎಂಬುದು ಮೇರಾ ಮಾಠಿ ಮೇರಾ ದೇಶ್ ಅಭಿಯಾನದ ಘೋಷಣೆಯಾಗಿದೆ. ದೇಶದ ವಿವಿಧ ಭಾಗಗಳ ಮೃತಿಕೆಗಳಿಂದ ಕೂಡಿದ 7,500 ಕಲಶಗಳಲ್ಲಿ ಸಂಗ್ರಹಿಸಿ ದೇಶದ ರಾಜಧಾನಿ ನವ ದೆಹಲಿಗೆ ತಂದು ಕರ್ತವ್ಯ ಪಥದ ಬಳಿ ಅಮೃತ ವಾಟಿಕಾ ಎಂಬ ಉದ್ಯಾನವನ್ನು ನಿರ್ಮಿಸಲು ಬಳಸಲಾಗುತ್ತಿದೆ.
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವ ಸ್ವಯಂಸೇವಕರು ತಮ್ಮ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ತಂದ ತಾಲ್ಲೂಕು ಮಟ್ಟದ ಮೃತಿಕೆ ಉಳ್ಳ ಅಮೃತ ಕಲಸಗಳನ್ನು ಜಿಲ್ಲಾ ಮತ್ತು ರಾಜ್ಯಮಟ್ಟದ ಅಧಿಕಾರಿಗಳಿಂದ ಪಡೆದು ದೆಹಲಿ ತಲುಪಿದ್ದಾರೆ. ನವದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿ ನಡೆಯುವ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಲ್ಲಿ ಅಮೃತವಾಟಿಕ ಕಲಸಕ್ಕೆ ಅಮೃತ ಕಳಶಗಳನ್ನು ನೀಡಿ ಅಕ್ಟೋಬರ್ 30 ಮತ್ತು 31 ರಂದು ನಡೆಯುವ ವಿವಿಧ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರೊಂದಿಗೆ ಭಾಗವಹಿಸಲಿದ್ದಾರೆ” ಎಂದು ಕರ್ನಾಟಕ ರಾಜ್ಯ ತಂಡದ ನಾಯಕ ರಾಜ್ಯ ರಾಷ್ಟ್ರೀಯ ಯುವ ಯೋಜನೆ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ ತಿಳಿಸಿದರು.