Melur, Sidlaghatta : ನವೆಂಬರ್ 1 ರಂದು ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸುವ ಅಭಿಯಾನಕ್ಕೆ ಮೇಲೂರು ಗ್ರಾಮ ಪಂಚಾಯಿತಿ ಕೈಜೋಡಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಕನ್ನಡ ಭಾಷೆ ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಬೇಕಾಗಿದೆ. ರಾಷ್ಟ್ರೀಯ ಪಕ್ಷಗಳು ಹಿಂದಿ ಯನ್ನು ರಾಜ್ಯದ ಮೇಲೆ ಹೇರಿಕೆ ಮಾಡುತ್ತಿವೆ. ಅದನ್ನು ತಡೆದು ಕರ್ನಾಟಕದ ಅಸ್ಮಿತೆಯಾಗಿರುವ ಕನ್ನಡದ ಅಭಿಮಾನ ಸ್ವಾಭಿಮಾನ ಮೂಡಿಸಲು ಮನೆ ಮನೆ ಮೇಲೆ ಕನ್ನಡದ ಭಾವುಟ ಹಾರಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು. ಕನ್ನಡ ಧ್ವಜಾರೋಹಣ ಮಾಡಿದ ನಂತರ ಸಾಯಂಕಾಲದ ವೇಳೆ ಆರೋಹಣ ಮಾಡಬೇಕು. ಧ್ವಜ ಗೌರವವನ್ನು ಕಾಪಾಡಬೇಕು.ಕನ್ನಡತನವನ್ನು ಬೆಳೆಸಬೇಕು ಎಂದು ವಿನಂತಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ರೂಪೇಶ್, ತ್ರಿಮೂರ್ತಿ, ಶ್ರೀಹರಿ, ವಿಶ್ವನಾಥ್, ಲಕ್ಷ್ಮೀಕಾಂತ್, ನಾರಾಯಣರಾಜು, ಅಬಿಷೇಕ್, ನಾಗೇಶ್ ಹಾಜರಿದ್ದರು.