Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಶ್ರೀ ಗಂಗಾದೇವಿ ಭಕ್ತಮಂಡಳಿ, ಶ್ರೀ ಗಂಗಾದೇವಿ ಧರ್ಮದರ್ಶಿ ಟ್ರಸ್ಟ್ ಮತ್ತು ಮೇಲೂರು ಗ್ರಾಮ ಪಂಚಾಯಿತಿ ವತಿಯಿಂದ ಮೂರನೇ ವರ್ಷದ ನವ ಚಂಡಿಕಾ ಯಾಗವನ್ನು ಶ್ರೀ ಗಂಗಾದೇವಿ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಗುರುವಾರ ಸಂಜೆ ಪ್ರಾರಂಭವಾದ ಪೂಜಾ ಕಾರ್ಯಕ್ರಮದಲ್ಲಿ ಗಂಗಾಪೂಜೆ, ಆಲಯ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಮೂಲದೇವತಾ ಪ್ರಾರ್ಥನೆ, ಯಾಗ ಶಾಲಾ ಪ್ರವೇಶ, ವಾಸ್ತುಪೂಜಾ, ಹೋಮ, ಉಮಾಮಹೇಶ್ವರಿ ಸ್ವಾಮಿಗೆ ಶ್ರೀ ರುದ್ರಪಾರಾಯಣ, ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿಗೆ ವಿಷ್ಣು ಸಹಸ್ರನಾಮ ಪಾರಾಯಣ, ಬಲಿಪ್ರಧಾನ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಶುಕ್ರವಾರ ಬೆಳಗ್ಗೆ ಗೋಪೂಜೆ, ನವಗ್ರಹ ಪೂಜೆ, ನವಚಂಡಿಕಾ ಹೋಮ, ಬಲಿಪ್ರಧಾನ, ಕನ್ನಿಕಾ ಪೂಜಾ, ಮೂಲದೇವತಾ ಪೂಜಾ, ದೀಪಾರಾಧನೆ, ಪೂರ್ಣಾಹುತಿ, ಕಲಶ ಪೂರ್ಜನಾ, ರಕ್ಷಾದ್ವಾದಶಿ ಹಾಗೂ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ನಂಜನಗೂಡು ಶೃಂಗೇರಿ ಶಾರದಾ ಪೀಠ, ಮೈಸೂರು ಗಣಪತಿ ಆಶ್ರಮದ ಅರ್ಚಕರಿಂದ ಅಷ್ಟದ್ರವ್ಯ ಗಣಪತಿ ಹೋಮ, ಶ್ರೀ ಗಂಗಾದೇವಿಗೆ ನವಚಂಡಿಯಾಗ, ಶ್ರೀ ಉಮಾಮಹೇಶ್ವರಿ ಸ್ವಾಮಿಗೆ ಶ್ರೀ ರುದ್ರ ಪಾರಾಯಣ ಹಾಗೂ ಶ್ರೀ ಸೌಮ್ಯ ಚನ್ನಕೇಶವ ಸ್ವಾಮಿಗೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ನಡೆಸಲಾಯಿತು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ. ಉಮೇಶ್, ಮುಖಂಡರಾದ ಬಿ.ಎನ್. ಸಚಿನ್, ಎಸ್.ಆರ್. ಶ್ರೀನಿವಾಸಮೂರ್ತಿ, ಎಚ್.ಟಿ. ಸುದರ್ಶನ್, ಸಿ. ಗಜೇಂದ್ರ, ಆರ್.ಕೆ. ರಾಮಕೃಷ್ಣಪ್ಪ, ಜೇಜಿಗೌಡ, ಅಶ್ವತ್ಥಪ್ಪ, ಎಂ.ಕೆ.ರವಿಪ್ರಸಾದ್, ರಮೇಶ್, ಮಂಜುನಾಥ್, ಆರ್.ಕೆ. ನಾರಾಯಣಸ್ವಾಮಿ, ಹರೀಶ್, ಧರ್ಮೆಂದ್ರ, ಎಂ.ಜೆ. ಪ್ರಭಾಕರ್, ಸುಧೀರ್ ಹಾಗೂ ಸುತ್ತ ಮುತ್ತಲಿನ ಊರುಗಳ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನ್ನದಾಸೋಹ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.