Sidlaghatta : ಶಿಡ್ಲಘಟ್ಟ ನಗರದ ಉಲ್ಲೂರುಪೇಟೆಯ ಅತ್ಯಂತ ಪುರಾತನ ಗ್ರಾಮದೇವತೆ ಶ್ರೀ ಮಾರಮ್ಮ ದೇವಿಯ ವಿಮಾನಗೋಪುರದ ಬ್ರಹ್ಮಕಳಶ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವವನ್ನು ಸೋಮವಾರದಿಂದ ಪ್ರಾರಂಭವಾಗಿ ಬುಧವಾರದವರೆಗೂ ಹಮ್ಮಿಕೊಳ್ಳಲಾಗಿತ್ತು.
ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗೆಪೂಜೆ, ಗೋಪೂಜೆ, ಅನುಜ್ಞೆ ಸ್ವಸ್ತಿವಾಚನ, ಅನಿರ್ವಾಣ ದೀಪಾರಾಧನೆ, ವಿಶ್ವಕ್ಸೇನ, ಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹವಾಚನ, ರಕ್ಷಾಬಂಧನ, ಧ್ವಜಾರೋಹಣ, ಋತ್ವಿಕಾವರಣ, ಅಂಕುರಾರ್ಪಣೆ, ವಾಸ್ತು ಕಳಾಶಾರಾಧನೆ, ರಾಕ್ಷೋಘ್ನ ಆರಾಧನೆ, ವಾಸ್ತು ಮಂಡಲಪೂಜೆ, ಅಗ್ನಿಪ್ರತಿಷ್ಠೆ, ಗಣಪತಿ, ವಾಸ್ತು, ರಾಕ್ಷೋಘ್ನ ಹೋಮ, ಲಘು ಪೂರ್ಣಾಹುತಿ, ವಾಸ್ತು ಬಲಿ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಮಂಗಳವಾರ ಬೆಳಗ್ಗೆ ಸುಪ್ರಭಾತ ಸೇವೆ, ಸರ್ವವಾದ್ಯ ಸೇವೆ, ವೇದ ಪಾರಾಯಣ, ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ಧ್ವಜ ಕುಂಭಾರಾಧನೆ, 108 ಕಳಶಾರಾಧನೆ, ಪ್ರಧಾನ ದೇವತಾರಾಧನೆ, ಗಣ ಹೋಮ, ನವಗ್ರಹ ಹೋಮ, ರುದ್ರ ಹೋಮ, ಕ್ಷೇತ್ರಪಾಲಕ ಹೋಮ, ದುರ್ಗಾ, ಗಾಯತ್ರಿ ಹೋಮ, ಸರಸ್ವತಿ ಶ್ರೀ ಸೂಕ್ತ ಹೋಮ, ಪರಿವಾರ ಹೋಮ, ಲಘು ಪೂರ್ಣಾಹುತಿ, ಪಂಚಗವ್ಯ ಸ್ನಪನ, ಬ್ರಹ್ಮ ಕಳಶ ಶುದ್ಧಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಮಂಗಳವಾರ ಸಂಜೆ ಲಲಿತಾ ಸಹಸ್ರನಾಮ ಪಾರಾಯಣ, ಅಖಂಡ ದೀಪಾರಾಧನೆ, ಮಹಾ ಸಂಕಲ್ಪ, ಗಣಪತಿ ಪೂಜೆ, ಕಳಶಾರಾಧನೆ, ಶ್ರೀಚಕ್ರ ಮಂಡಲಾರಾಧನೆ, ದೀಪಾ ದುರ್ಗಾ ಪೂಜೆ, ಕುಮಾರಿ ಸುಹಾಸಿನಿ ಪೂಜೆ, ಅಗ್ನಿಪ್ರತಿಷ್ಠೆ, ಮಹಾ ಚಂಡಿಕಾ ಹೋಮ, ಪರಿವಾರ ಹೋಮ, ಲಘು ಪೂರ್ಣಾಹುತಿ, ಬ್ರಹ್ಮ ಕಳಶಕ್ಕೆ ಅದಿವಾಸ ಪೂಜೆ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗಿಸಲಾಯಿತು.
ಬುಧವಾರ ಮುಂಜಾನೆ ಸುಪ್ರಭಾತ ಸೇವೆ, ಬ್ರಾಹ್ಮೀ ಮುಹೂರ್ತದಲ್ಲಿ ವಿಮಾನ ಗೋಪುರದಲ್ಲಿ ಬ್ರಹ್ಮ ಕಳಶ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಗೋಪುರ ದಿಷ್ಟ ದೇವತಾಹೋಮ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮಹಾಸಂಕಲ್ಪ ಪೂರ್ವಕ ಮಹಾಪೂರ್ಣಾಹುತಿ, ಕಳಶಗಳ ವಿಸರ್ಜನೆ, ಗ್ರಾಮ ಪ್ರದಕ್ಷಿಣೆ, ಮಹಾ ಕುಂಭಾಭಿಷೇಕ, ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪ ಅಲಂಕಾರ, ಅಷ್ಠದಿಕ್ಪಾಲಕ ಬಲಿ, ಅಷ್ಠಾವಧಾನ ಸೇವೆ, ಮಹಾನೈವೇದ್ಯ, ರಾಷ್ಟ್ರಾಶೀರ್ವಾದ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಬಂಡಿ ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಕುಮಾರ್ ಆಗಮಿಸಿದ್ದರು. ಮಧ್ಯಾಹ್ಮ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಕಳಶಗಳನ್ನು ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪ್ರಧಾನ ಅರ್ಚಕ ವರದರಾಜು ರಾಮಾನುಜ ದಾಸನ್, ಶ್ರೀರಾಮ ಭಜನೆ ಮಂದಿರ ಅಭಿವೃದ್ಧಿ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.