ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿನ ವಾಲ್ಮೀಕಿ ಭವನದಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ‍್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ರೀರಾಮಾಯಣವು ಸಾರ್ವಕಾಲಿಕವಾದುದು. ಅದನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿವೆ. ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ, ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ. ಇಂದು ಬಹುತೇಕರಿಗೆ ಕಿರಿಯರು ಹಿರಿಯರು ಗುರುಗಳು ಎನ್ನುವ ಭಾವನೆ ಕಡಿಮೆ ಆಗುತ್ತಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ನಾನು ನನ್ನದು ಎನ್ನುವ ಸಂಕುಚಿತ ಭಾವ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮುದಾಯದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜಿಕ ಕಾರ‍್ಯಕರ್ತ ಬಿ.ಈ.ಸುರೇಶ್ ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯ ರಾಮಾಯಣದ ಮಹತ್ವವನ್ನು ತಿಳಿಸುವ ಪ್ರಧಾನ ಭಾಷಣ ಮಾಡಿದರು.
ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಇದಕ್ಕೂ ಮೊದಲು ತಲಕಾಯಲಬೆಟ್ಟದಲ್ಲಿನ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಸಮುದಾಯದ ಮುಖಂಡರಾದ ಎನ್.ಮುನಿಯಪ್ಪ, ನಂಜಪ್ಪ, ರಾಜೇಂದ್ರ, ಯುವ ಘಟಕದ ಗಿರೀಶ್ ನಾಯಕ್, ಮುತ್ತೂರು ವೆಂಕಟೇಶ್, ಮಹಿಳಾ ಘಟಕದ ನಾಗವೇಣಿ, ತಹಶೀಲ್ದಾರ್ ಬಿ.ಎಸ್.ರಾಜೀವ್, ಇಒ ಚಂದ್ರಕಾಂತ್, ಆಯುಕ್ತ ಶ್ರೀಕಾಂತ್, ಟಿಎಚ್‌ಒ ಡಾ.ವೆಂಕಟೇಶ್‌ಮೂರ್ತಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi