Mallur, Sidlaghatta : ದಿ.ಎಂ.ಎಸ್.ರಾಮಯ್ಯ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಿಡ್ನಿ ಮೂತ್ರಕೋಶದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು (Health Camp) ಉದ್ಘಾಟಿಸಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ (M S Ramaiah Hospital) ಹಿರಿಯ ಪ್ರಾಧ್ಯಾಪಕ ಪ್ರೊ.ರಮೇಶ್ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ಹೆಚ್ಚಬೇಕು, ಯಾವುದೆ ರೋಗವಾಗಲಿ ಆರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಯಾವುದೆ ರೀತಿಯ ರೋಗವಾಗಲಿ ಗುಣಮುಖವಾಗುತ್ತದೆ ಎಂದು ತಿಳಿಸಿದರು.
ಬಹುತೇಕ ಮಂದಿ ಆರಂಭಿಕ ಹಂತದಲ್ಲಿ ಎಚ್ಚೆತ್ತುಕೊಳ್ಳದೆ ನಿರ್ಲಕ್ಷಿಸುವುದರಿಂದಲೆ ಮುಂದೆ ಗಂಭೀರ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಈ ರೀತಿಯ ಶಿಬಿರಗಳು ನಡೆದರೆ ಅನೇಕರಿಗೆ ಅನುಕೂಲ ಆಗಲಿದೆ.
ಈ ನಿಟ್ಟಿನಲ್ಲಿ ಪುವ್ವಾಡ ಫೌಂಡೇಷನ್‌ನ ಡಾ.ಸಂದೀಪ್ ಹಾಗೂ ಕುಟುಂಬದವರು ಕಳೆದ ಹಲವಾರು ವರ್ಷಗಳಿಂದಲೂ ಇಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ರಾಮಯ್ಯ ಆಸ್ಪತ್ರೆಯ ಪ್ರೊ.ತರುಣ್, ಡಾ.ಎಂ.ಪ್ರಸಾದ್, ಡಾ.ಸಂದೀಪ್ ಪುವ್ವಾಡ ಅವರ ತಂಡವು ಶಿಬಿರದಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಔಷಗಳನ್ನು ವಿತರಿಸಿದರು.
ಮಳ್ಳೂರು, ಮೇಲೂರು ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಸುಮಾರು 500 ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು.
ಪುವ್ವಾಡ ಫೌಂಡೇಷನ್‌ನ ಎಂ.ಜಿ.ಕಲಾವತಿ, ಡಾ.ಸಂದೀಪ್ ಪುವ್ವಾಡ, ಎಂ.ಕೆ.ಪ್ರಿಯಾಂಕ, ಮನೋಜ್, ಮೇಷ್ಟ್ರುಪುಟ್ಟಣ್ಣ, ತಿಲಕ್, ನವೀನ್, ದಿಲೀಪ್, ಮೇಲೂರು ಮಂಜುನಾಥ್, ಕೊಂಡೇನಹಳ್ಳಿ ಮಂಜುನಾಥ್ ಹಾಜರಿದ್ದರು.