Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೋಟಹಳ್ಳಿ (Kotahalli) ಗ್ರಾಮದಲ್ಲಿ ಕರಗದಮ್ಮ ದೇವಿ ದೇವಾಲಯದ (Karagadamma Devi Temple) ಗೋಪುರದ ಕಳಶ ಪ್ರತಿಷ್ಠಾಪನೆ, ಮಹಾಭಿಷೇಕ ನಾಗದೇವತೆ ಹಾಗೂ ಶ್ರೀ ಮಾರಮ್ಮದೇವಿ 7 ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ರಾತ್ರಿಯಿಂದಲೇ ಗ್ರಾಮಸ್ಥರಿಂದ ಗಂಗೆ ಪೂಜೆ ಕಳಸ ಸ್ಥಾಪನೆ ಹೋಮ ಹವನಾದಿಗಳು ನಡೆದವು. ಬೆಳಿಗ್ಗೆ ಕರಗದಮ್ಮ ದೇವಿಗೆ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ನಡೆಯಿತು. ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹಾಗೂ ವಿಜಯಪುರದ ಶ್ರೀ ಮಹಾದೇವ ಸ್ವಾಮಿಗಳ ಅಮೃತಹಸ್ತದಿಂದ ಕುಂಬಾಭಿಷೇಕ ನಡೆಯಿತು.
ನಂತರ ಗಣಪತಿ ಹೋಮ ವಾಸ್ತು ಹೋಮ ನವಗ್ರಹ ಹೋಮ ದುರ್ಗಾ ಹೋಮ ನಡೆಯಿತು. ದರ್ಶನಕ್ಕೆ ಬಂದಿದ್ದ ನೂರಾರು ಭಕ್ತಾದಿಗಳು ಕರಗದಮ್ಮ ದೇವಿ ಕುಂಭಾಭಿಷೇಕದಲ್ಲಿ ಭಾಗವಹಿಸಿ ಮಹಾಮಂಗಳಾರತಿ ತೀರ್ಥ ಪ್ರಸಾದಗಳನ್ನು ಪಡೆದು ದೇವರ ಪೂಜೆಯಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಕುಲಬಾಂಧವರು, ಕೋಟಹಳ್ಳಿ ಗ್ರಾಮಸ್ಥರು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.