Home News ಕೆಂಪನಹಳ್ಳಿ ಜಾತ್ರಾ ಮಹೋತ್ಸವದ ವಿಶಿಷ್ಟ ಕುದುರೆ ಹರಕೆ

ಕೆಂಪನಹಳ್ಳಿ ಜಾತ್ರಾ ಮಹೋತ್ಸವದ ವಿಶಿಷ್ಟ ಕುದುರೆ ಹರಕೆ

0
Thousands of devotees from neighbouring villages and towns gathered in Kempanahalli to celebrate the annual Jatra Mahotsava featuring a unique horse dolls offering.

Kempanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೆಂಪನಹಳ್ಳಿಯಲ್ಲಿ ಸೋಮವಾರ ರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ವಿಶಿಷ್ಟ ಕುದುರೆ ಹರಕೆ ಕಾರ್ಯಕ್ರಮವನ್ನು ನಡೆಸಲಾಯಿತು.

ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದಿಂದ ಹಾಗೂ ಸುತ್ತಲಿನ ನಗರಗಳಿಂದಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

ರಾತ್ರಿಯಿಡೀ ನಡೆಯುವ ಜಾತ್ರೆಯಲ್ಲಿ ಈ ಹಿಂದೆ ಹರಕೆಯನ್ನು ಹೊತ್ತವರು, ಇಷ್ಠಾರ್ಥ ನೆರವೇರಿದವರು, ಕುದುರೆ ಆಕಾರದ ಗೊಂಬೆಗಳನ್ನು ಹೊತ್ತು ಡೋಲು ವಾದನದೊಂದಿಗೆ ಗ್ರಾಮದ ಬಂಡೆಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಕ್ಕಮಹಾದೇವಿ ದೇವಸ್ಥಾನಕ್ಕೆ ಹೋದರು. ಅಲ್ಲಿ ಕೂಡ ಪೂಜೆ ಸಲ್ಲಿಸಿ, ಅಲ್ಲಿಂದ ಸುಮಾರು ಒಂದು ಕಿಮೀ ದೂರದ ಅರಳಿಮರದ ಬಳಿ ಇರುವ ಆಂಜನೇಯಸ್ವಾಮಿಗೆ ಪ್ರದಕ್ಷಿಣೆ ಹಾಕಿ ಕುದುರೆಗಳನ್ನಿಳಿಸಿದರು. ಬೆಳಗಿನ ಜಾವದಲ್ಲಿ ದೀಪಗಳನ್ನು ಹೊತ್ತು ಪೂಜೆ ಸಲ್ಲಿಸಿದರು.

ಹಲವು ದಶಕಗಳಿಂದ ಈ ಆಚರಣೆ, ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು ಒಗ್ಗೂಡಿ ನಡೆಸುವ ಈ ಎರಡು ದಿನಗಳ ಆಚರಣೆಯು ಹಳ್ಳಿಯಲ್ಲಿ ಭೇದ ಭಾವವನ್ನು ತೊಡೆದುಹಾಕುತ್ತದೆ ಎನ್ನುತ್ತಾರೆ ಗ್ರಾಮಸ್ಥರು.


Jatra Mahotsava Celebrates Unique Horse Doll Offering in Kempanahalli

Kempanahalli, sidlaghatta : The annual Jatra Mahotsava in Kempanahalli, Sidlaghatta taluk, featured a unique horse dolls offering that drew thousands of devotees from neighbouring villages and towns. The night-long fair included the puja of horse-shaped dolls at the Bandanna temple in the village, followed by a procession to the Akkamahadevi temple where worshippers offered pooja.

The devotees then went to the Anjaneyaswamy idol near a Banyan tree, where they performed puja and carried lamps over their heads the following morning. The celebration, which has been held for many decades, aims to eliminate discrimination in the village and is organized and celebrated by the villagers themselves.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version