ಶಿಡ್ಲಘಟ್ಟ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನೂತನ ಕಸಾಪ ಜಿಲ್ಲಾ ಅಧ್ಯಕ್ಷರಿಗೆ ಏರ್ಪಡಿಸಿದ್ದ ಅಭಿನಂದನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿದರು
ಸಾಹಿತ್ಯಕ್ಕೆ ತನ್ನದೆ ಆದ ಶಕ್ತಿ ಇದೆ. ಸದೃಢ ದೇಶ ನಿರ್ಮಾಣಕ್ಕೆ ನಾಡ ಭಾಷೆ ಸದೃಢವಾಗಬೇಕಿದೆ. ಜಿಲ್ಲಾಧಿಕಾರಿಯವರು ಪ್ರತಿಯೊಂದು ತಾಲ್ಲೂಕಿನಲ್ಲಿಯೂ ಒಂದೊಂದು ಕನ್ನಡ ಭವನ ನಿರ್ಮಿಸಲು ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಾಮಾಜಿಕ ಬದಲಾವಣೆಯಲ್ಲಿ ಸಾಹಿತ್ಯ ಮಹತ್ತರ ಪಾತ್ರ ವಹಿಸಲಿರುವುದರಿಂದ, ಜನರಲ್ಲಿ ಓದಿನ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು ಗಮನಹರಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ, ಜಾರಿಗೆ ತರುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ ಕನ್ನಡ ಶಾಲೆಗಳು ಗಟ್ಟಿಗೊಳಿಸಬೇಕು. ಸರ್ಕಾರ ಕನ್ನಡ ಭಾಷೆಯ ಶಾಲಾ ವಿದ್ಯಾರ್ಥಿಗಳಿಗೆಂದೆ ವಿಶೇಷ ಪ್ರೊತ್ಸಾಹದಾಯಕ ಯೋಜನೆಯನ್ನು ಜಾರಿಗೆ ತರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಸುವಂತೆ ಮಾಡಬೇಕಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಸಾಹಿತ್ಯ ಪರಿಷತ್ತಿನ ಭವನಗಳನ್ನು ನಿರ್ಮಾಣ ಮಾಡಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಸಾಹಿತಿ ಗೋಪಾಲಗೌಡ ಕಲ್ವಮಂಜರಿ, ಯಲುವಳ್ಳಿ ಸೋಣ್ಣೆಗೌಡ, ಭಕ್ತರಹಳ್ಳಿ ಬೈರೇಗೌಡ, ಎ.ಎಂ.ತ್ಯಾಗರಾಜ್, ಅಮೃತ್ ಕುಮಾರ್, ಬಿ.ಆರ್.ಅನಂತಕೃಷ್ಣ, ದಾಕ್ಷಾಯಿಣಿ, ಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ, ಕೃಷ್ಣ, ರಮೇಶ್, ಡಾ.ಡಿ.ಟಿ.ಸತ್ಯನಾರಾಯಣರಾವ್, ರಾಮಾಂಜಿ, ನರಸಿಂಹಪ್ಪ, ಗಜೇಂದ್ರ, ನರಸಿಂಹರಾಜು, ಕುಂದಲಗುರ್ಕಿ ಮುನೀಂದ್ರ, ಚಿದಾನಂದ, ಕಲಾವಿದ ನಾಗೇಶ್, ನಂದಕುಮಾರ್, ಶ್ರೀರಾಮಯ್ಯ ಹಾಜರಿದ್ದರು.