ಜಿಂಕೆಯೊಂದನ್ನು ಬೇಟೆಯಾಡಿ ಕತ್ತರಿಸಿ ಮಾಂಸ ಸಾಗಾಣಿಕೆ ಮಾಡಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಓರ್ವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕನ್ನಮಂಗಲ ಅರಣ್ಯ ಪ್ರದೇಶದ ಸರ್ವೇ ನಂ 89 ರ ಜಮೀನಿನಲ್ಲಿ ಜಿಂಕೆಯೊಂದನ್ನು ಭೇಟೆಯಾಡಿ ಮಾಂಸ ಸಾಗಾಣಿಕೆ ಮಾಡಿರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಹಾಗೂ ವಲಯ ಅರಣ್ಯಾಧಿಕಾರಿ ಆರ್.ದಿವ್ಯಾ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ, ಆರೋಪಿ ನಾರಾಯಣದಾಸರಹಳ್ಳಿಯ ಎಸ್.ದೇವರಾಜ ನನ್ನು ಬಂಧಿಸಿ ಅರಣ್ಯ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ನಾರಾಯಣದಾಸರಹಳ್ಳಿಯ ಗೋಕುಲ್, ನರಸಿಂಹಮೂರ್ತಿ, ಮತ್ತು ರಾಜಪ್ಪ ಎಂಬುವವರು ಸಧ್ಯ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಸ್.ಎನ್.ಜಯಚಂದ್ರ, ಜಿ.ಆರ್.ಭಾಸ್ಕರಬಾಬು, ಅರಣ್ಯ ರಕ್ಷಕರಾದ ಕಾಶೀನಾಥ ಸಿಂಧೂರ, ಗೋವಿಂದರಾಜು.ಎ. ನವೀನ್.ಕೆ ಪಾಲ್ಗೊಂಡಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi