Sidlaghatta : ಸರ್ಕಾರದ ಸೌಲಭ್ಯ ಪಡೆಯುವಲ್ಲಿ ನಮ್ಮ ಸಮುದಾಯ ಬಹಳಷ್ಟು ಹಿಂದೆ ಇದೆ. ಸಮುದಾಯದಲ್ಲಿ ವಿದ್ಯಾಭ್ಯಾಸದ ಕೊರತೆ ಇದೆ. ಇನ್ನಾದರೂ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ತಿಳಿದುಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಾಂಭವ ಯುವ ಸೇನಾ ರಾಜ್ಯ ಅಧ್ಯಕ್ಷ ಎಸ್.ಎಂ.ರಮೇಶ್ ಚಕ್ರವರ್ತಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದ ಮುಂಭಾಗ ಭಾನುವಾರ ಜಾಂಭವ ಯುವ ಸೇನಾ ಶಿಡ್ಲಘಟ್ಟ ಟೌನ್ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಜಿಲ್ಲೆ, ತಾಲ್ಲೂಕು ಕಾರ್ಮಿಕ ಘಟಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮುದಾಯದ ನಾಯಕತ್ವ ವಹಿಸಿರುವ ನಾಯಕರು ಸಮುದಾಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ. ಸಂಘಟನೆಗಳ ಮೂಲಕ ಪ್ರತಿಯೊಂದು ಮಾಹಿತಿಯನ್ನು ಸಮರ್ಪಕವಾಗಿ ತಿಳಿದುಕೊಳ್ಳಿ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಶಾಲೆಗಳಲ್ಲಿ ನಮ್ಮ ಸಮುದಾಯದವರು ಹೆಚ್ಚು ವಿದ್ಯಾಭ್ಯಾಸ ಪಡೆಯುವಂತೆ ಜಾಗೃತಿ ವಹಿಸಿ ಎಂದು ಸಲಹೆ ನೀಡಿದರು.
ಬೆಳಗಾಂ ಜಿಲ್ಲಾ ಅಧ್ಯಕ್ಷೆ ರಾಮವ್ವ ಸಲೀಂ ಕುರೇಶಿ, ಭಾರತೀಯ ಸ್ತ್ರೀಶಕ್ತಿ ಸಂಘ ರಾಜ್ಯಾಧ್ಯಕ್ಷೆ ಭಾಗ್ಯ ಸರ್ವಣ, ಬೆಂಗಳೂರು ಜಿಲ್ಲಾ ನಗರ ಅಧ್ಯಕ್ಷ ದ್ರಾವಿಡ್ ಸರ್ವಣ, ಹನುಮಂತ್, ಮಂಜು, ಗೊರ್ಲಪ್ಪ, ಚಿಕ್ಕನರಸಿಂಹಯ್ಯ, ದಲಿತ ಮುಖಂಡರಾದ ನಾಗನರಸಿಂಹ, ಕೃಷ್ಣಮೂರ್ತಿ, ಸುಹೇಲ್, ದೇವರಾಜ್, ಅಶೋಕ್, ಅವುಲರೆಡ್ಡಿ, ಜಾಂಭವ ಯುವಸೇನಾ ಜಿಲ್ಲಾ ಸಮಿತಿ ಸದಸ್ಯರು, ತಾಲ್ಲೂಕು ಸಮಿತಿ ಸದಸ್ಯರು, ಜಿಲ್ಲಾ ಕಾರ್ಮಿಕ ಘಟಕದ ಪದಾಧಿಕಾರಿಗಳು, ತಾಲ್ಲೂಕು ಕಾರ್ಮಿಕ ಘಟಕದ ಪದಾಧಿಕಾರಿಗಳು, ತಾಲ್ಲೂಕಿನ ಇರಗಪ್ಪನಹಳ್ಳಿ, ಗಾಂಡ್ಲಚಿಂತೆ, ದಡಂಘಟ್ಟ, ತಲಕಾಯಲಬೆಟ್ಟ, ಈ ತಿಮ್ಮಸಂದ್ರದ ಸದಸ್ಯರು ಹಾಜರಿದ್ದರು.