Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಭಾನುವಾರ ತಲಕಾಯಲಬೆಟ್ಟ ಬ್ರಾಹ್ಮಣರ ಸಂಘ, ದಿಬ್ಬೂರಹಳ್ಳಿ ಶಂಕರ ಸೇವಾ ಸಮಿತಿ ಮತ್ತು ಗಾಯತ್ರಿ ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ISRO ದ ಚಂದ್ರಯಾನ ಉಡಾವಣೆಯ ಮುಂಚೂಣಿ ವಿಜ್ಞಾನಿ ಶ್ರೀನಾಥ್ ಮತ್ತು ಚಂದ್ರಕಲಾ ಶ್ರೀನಾಥ್, ಜಿಲ್ಲಾ ಮಟ್ಟದ ಚುನಾಯಿತ ವಿಪ್ರ ಜನಪ್ರತಿನಿಧಿಗಳು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಜಿಲ್ಲೆಯ ಚುನಾಯಿತ ವಿಪ್ರ ಜನಪ್ರತಿನಿಧಿಗಳಾದ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಂಜುನಾಥ್, ಮಂದಿಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣರಾವ್, ಕಣಿತಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಾಕೃಷ್ಣ, ಪೂರ್ಣಿಮ, ಇಸ್ರೋ ವಿಜ್ಞಾನಿ ಶ್ರೀನಾಥ್ ಮತ್ತು ಚಂದ್ರಕಲಾ ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗಭೂಷಣರಾವ್, ಅಶ್ವತ್ಥನಾರಾಯಣ್, ಪಲಿಚೇರ್ಲು ಪ್ರಕಾಶ್, ಮಂಜುನಾಥ್, ರಮೇಶ್, ರಘುವೀರ್, ಹರೀಶ್ ಬಾಬು, ಸಿ.ಜಿ.ರಾಮಕೃಷ್ಣರಾವ್ ಹಾಜರಿದ್ದರು.