Melur, Sidlaghatta : ನೇಪಾಳದ ಕಠ್ಮಂಡುವಿನಲ್ಲಿ ಆರಂಭವಾಗಿರುವ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಲಾನ್ ಟೆನ್ನಿಸ್ ಪಂದ್ಯಾವಳಿಯಲ್ಲಿ (12 ವರ್ಷದೊಳಗಿನ) ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ವಾಸಿ ಎಂ.ಪುನೀತ್ ಭಾರತ ಟೆನ್ನಿಸ್ ಆಟಗಾರರ ತಂಡವನ್ನ ಪ್ರತಿನಿಸಿಧಿದ್ದಾನೆ.
ನೇಪಾಳ, ಭೂತಾನ್, ಮಾಲ್ಡೀವ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕ ದೇಶಗಳೊಂದಿಗೆ ಭಾರತದ ಟೆನ್ನಿಸ್ ಆಟಗಾರರು ಸೆಣಸಲಿದ್ದು 12 ವರ್ಷದೊಳಗಿನ 6 ಮಂದಿ ಟೆನ್ನಿಸ್ ಆಟಗಾರರು ಈಗಾಗಲೆ ನೇಪಾಳದ ಕಠ್ಮಂಡುವಿನ ಟೆನ್ನಿಸ್ ಅಂಕಣವನ್ನು ತಲುಪಿದ್ದಾರೆ.
ಈಗಾಗಲೆ ಭಾರತ ಚಾಂಪಿಯನ್‌ಷಿಪ್ ಪಟ್ಟ ಅಲಂಕರಿಸಿರುವ ನನ್ನ ಮಗ ಎಂ.ಪುನೀತ್ ನೇಪಾಳದ ಕಠ್ಮಂಡುವಿನಲ್ಲಿ ನಡೆಯುತ್ತಿರುವದಕ್ಷಿಣ ಏಷ್ಯಾ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆಹೆಮ್ಮೆಯ ವಿಷಯವಾಗಿದೆ.
ಅವನ ಗೆಲುವು ಕೇವಲ ಅವನ್ನದ್ದಲ್ಲ ಅದು ದೇಶದ ಗೆಲುವು ಆಗಲಿದ್ದು ಕ್ರೀಡಾ ಸ್ಪೂರ್ತಿ ತೋರಿ ಗೆದ್ದು ಬರಲಿದ್ದಾನೆ ಎನ್ನುವನಂಬಿಕೆಯಿದೆ, ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಹಾರೈಕೆಯಿದೆ
-ಡಾ.ಮನೋಹರ್, ಎಂ.ಪುನೀತ್ ಅವರ ತಂದೆ.
ಮೂರು ಮಂದಿ ಬಾಲಕಿಯರು, ಮೂರು ಮಂದಿ ಬಾಲಕರ ತಂಡದಲ್ಲಿ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದ ವೈದ್ಯರಾದ ಡಾ.ಮನೋಹರ್, ನಮ್ರತಾ ದಂಪತಿಗಳ ಮಗ ಎಂ.ಪುನೀತ್ ಸಹ ಭಾರತದ ತಂಡವನ್ನು ಪ್ರತಿನಿಸಿಧಿದ್ದು ಹೆಮ್ಮೆಯ ವಿಷಯವಾಗಿದೆ.
ವಾರದ ಕಾಲ ನಡೆಯುವ ಈ ಅಂತರಾಷ್ಟ್ರೀಯ ಟೆನ್ನಿಸ್ ಟೂರ್ನಿಮೆಂಟ್ ನಲ್ಲಿ ಬಾಲಕಿಯರು ಹಾಗೂ ಬಾಲಕರಿಗೆ ಪ್ರತ್ಯೇಕವಾಗಿಯೆ ಸ್ಪರ್ಧೆ ನಡೆಯಲಿದ್ದು ಇಲ್ಲಿ ವಿಜೇತರಾಗುವ ವಿನ್ನರ್ ಮತ್ತು ರನ್ನರ್ ಆಫ್ ಇಬ್ಬರಿಗೂ ಮುಂದೆ ಕಝಕಿಸ್ತಾನ್‌ನಲ್ಲಿ ನಡೆಯುವ ಏಷ್ಯಾ ಅಂತರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಈಗಾಗಲೆ ಅನೇಕ ಪಂದ್ಯಾವಳಿಗಳಲ್ಲಿ ಆಟ ಆಡಿರುವ ಎಂ.ಪುನೀತ್ 12 ವರ್ಷದೊಳಗಿನವರಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಇದೀಗ ಅಂತರಾಷ್ಟ್ರೀಯ ಚಾಂಪಿಯನ್ ಷಿಪ್ ಗಾಗಿ ಅದೃಷ್ಟ ಪರೀಕ್ಷೆಗೆಂದು ಕಣಕ್ಕಿಳಿದಿದ್ದಾನೆ.
ಭಾರತವನ್ನು ಪ್ರತಿನಿಧಿಸುತ್ತಿರುವ ಬಾಲಕರ ತಂಡದಲ್ಲಿ ಎಂ.ಪುನೀತ್, ಆರವ್ ಚಲ್ಲಾನಿ,ಯುವನ್ ಗರ್ಗ್ ಭಾಗವಹಿಸಲಿದ್ದು ಇಂದ್ರ ಕುಮಾರ್ ಮಹಾಜನ್ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ.
ಬಾಲಕಿಯರ ತಂಡದಲ್ಲಿ ಖುಷಿ ಕದಿಯಾನ್, ಸರನಾ ಗೆಹ್ಲೋಟ್, ಶ್ರಿಷ್ಠಿ ಕಿರಣ್ ಇದ್ದು ಆಶಾ ಶರ್ಮ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ.