Sidlaghatta : ಜಿಲ್ಲಾ ಕಸಾಪ (Kannada Sahitya Parishat – KaSaPa), ಶಿಡ್ಲಘಟ್ಟ ತಾಲ್ಲೂಕು ಕಸಾಪ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವದ ನೆನಪಿನಲ್ಲಿ ಭಾರತದ ಸ್ವಾತಂತ್ರ್ಯಹೋರಾಟದ (Indian Freedom Struggle) ಬಗ್ಗೆ ಪ್ರಬಂಧ ಸ್ಪರ್ದೆ (Essay Competition) ಮತ್ತು ಲಿಖಿತ ಪರೀಕ್ಷೆಯನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾರತದ ಸ್ವಾತಂತ್ರ್ಯ ಹೋರಾಟ – ಕವಿಗಳು, ಸಾಹಿತಿಗಳು, ಸಂವಿಧಾನ, ನಾಡು ನುಡಿ, ಪ್ರಶಸ್ತಿ ಗಳು, ವ್ಯಾಕರಣಗಳು, ಕನ್ನಡದ ಪ್ರಥಮಗಳು ಮತ್ತು ಕನ್ನಡದ ಕೃತಿಗಳು ಮುಂತಾದ ಬಗ್ಗೆ ಒಟ್ಟು 100 ಪ್ರಶ್ನೆಗಳಿಗೆ ಉತ್ತರವನ್ನು ಒ.ಎಂ.ಆರ್ ಹಾಳೆಯಲ್ಲಿ ಗುರುತು ಮಾಡಲು ನೀಡಲಾಗಿತ್ತು.
ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ “ಸ್ವಾತಂತ್ರ್ಯ ಹೋರಾಟದ ಆಶಯಗಳು ಮತ್ತು ಅನುಷ್ಠಾನ” ಪ್ರಬಂಧ ಸ್ಪರ್ಧೆ ಮತ್ತು ಪದವಿ ಹಾಗೂ ತತ್ಸಮಾನ ತರಗತಿಗಳಿಗೆ “ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನದ ಆಶಯಗಳು” ಕುರಿತು ಪ್ರಬಂಧ ಸ್ವರ್ದೆಯನ್ನು ಆಯೋಜಿಸಲಾಗಿತ್ತು.
ತಾಲೂಕಿನ ವಿವಿಧ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ತರಗತಿಗಳ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, “ಸ್ವಾತಂತ್ರ್ಯ ಅಮೃತಮಹೋತ್ಸವದ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಈ ದಿನ ಭಾಗವಹಿಸಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ “ಪ್ರಮಾಣ ಪತ್ರ, ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಚಿತ್ರಪಟಗಳನ್ನು ನೀಡಲಾಗಿದೆ ಮತ್ತು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ದಿನಾಂಕ ಆಗಸ್ಟ್ 6 ರ ಶನಿವಾರದಂದು ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು” ಎಂದರು.
ಸ್ವಾತಂತ್ರ್ಯ ಹೋರಾಟದ ಅಮೃತಮಹೋತ್ಸವದ ನೆನಪಿನಲ್ಲಿ ಈ ಕಾರ್ಯಕ್ರಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಂಭುಲಿಂಗೇಶ್, ಉಪನ್ಯಾಸಕ ಲಕ್ಷ್ಮಯ್ಯ, ಎನ್.ಎಸ್.ಎಸ್. ಮುನಿರಾಜು, ಉಪನ್ಯಾಸಕ ಕೆ.ಎಂ. ಲೋಕೇಶ್, ಶಿಕ್ಷಕರಾದ ಮೂರ್ತಿ, ಓಂ ಶಂಕರ್, ಜಯಶ್ರೀ, ನಾಗಮಣಿ, ಪವಿತ್ರ ಬಡಿಗೇರ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.