Home News ಕಾಂಗ್ರೆಸ್ ಪಕ್ಷದಿಂದ ಪುಟ್ಟು ಆಂಜಿನಪ್ಪ ಉಚ್ಚಾಟನೆ

ಕಾಂಗ್ರೆಸ್ ಪಕ್ಷದಿಂದ ಪುಟ್ಟು ಆಂಜಿನಪ್ಪ ಉಚ್ಚಾಟನೆ

Puttu Anjinappa Faces Party Expulsion for Rebelling Against Congress Nominee

0

Sidlaghatta : ಶಿಡ್ಲಘಟ್ಟ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿ ಫಾರಂ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಅಕೃತ ಅಭ್ಯರ್ಥಿ ರಾಜೀವ್‌ಗೌಡ ಅವರ ವಿರುದ್ದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ರ್ಸ್ಪಸಿರುವ ಹಿನ್ನಲೆಯಲ್ಲಿ ಪುಟ್ಟು ಆಂಜಿನಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಆದೇಶಿಸಿದ್ದಾರೆ.

ಈ ಕುರಿತು ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿರುವ ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೂರು ಮುರಳಿ, ಪುಟ್ಟು ಆಂಜಿನಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಅವರು ಕ್ಷೇತ್ರದಲ್ಲಿ ಪಕ್ಷದ ಧ್ವಜ, ಬ್ಯಾನರ್‌ನಡಿ ಚುನಾವಣೆಯ ಚಟುವಟಿಕೆಗಳನ್ನು ನಡೆಸಬಾರದು.

ಪಕ್ಷದ ಆದೇಶದಂತೆ ಪುಟ್ಟು ಆಂಜಿನಪ್ಪ ಅವರೊಂದಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂದು ಅವರು ಮನವಿ ಮಾಡಿದ್ದಾರೆ. ಈ ವೇಳೆ ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಸಪೇಟೆ ಮುನಿಯಪ್ಪ, ಕೆಪಿಸಿಸಿ ಸದಸ್ಯ ಮಾದೇನಹಳ್ಳಿ ರವಿ ಹಾಜರಿದ್ದರು.

Independent Candidate Expelled from Congress Party for 6 Years

Independent Candidate Expelled from Congress Party for 6 Years

Sidlaghatta : Puttu Anjinappa, an independent candidate who contested the Sidlaghatta assembly election without obtaining a B form from the Congress party, has been expelled from the primary membership of the party for a duration of 6 years.

The decision to expel Puttu Anjinappa was made by K. Rehman Khan, the Chairman of the KPCC Disciplinary Committee, due to his act of rebelling against the Congress party’s official candidate, Rajiv Gowda, and accepting nomination as an independent candidate.

Meluru Murali, the President of Chilakalanerpu Block Congress, responded to the journalist’s query and confirmed the expulsion of Puttu Anjinappa from the party. Murali emphasized that Anjinappa is not allowed to engage in any election activities under the Congress party’s flag and banner within the constituency.

Furthermore, Murali urged all party members, including Puttu Anjinappa, to comply with the party’s directive and refrain from participating in any election-related activities. The announcement was made in the presence of Hospet Muniappa, the President of Jangamakote Block Congress, and Madenahalli Ravi, a member of the KPCC.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version