Handiganala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ವಡಿಗೇನಹಳ್ಳಿ ಮುನಿಶಾಮಪ್ಪ ಹಾಗೂ ಪಿಳ್ಳಮ್ಮ ಅವರ ಕುಟುಂಬ ಮತ್ತು ಹಂಡಿಗನಾಳ ಗ್ರಾಮಸ್ಥರು ಸೇರಿ ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ನಾವು ನಮ್ಮ ಮಕ್ಕಳಿಗೆ ಹಿರಿಯರು ಕಿರಿಯರಿಗೆ ಗೌರವವನ್ನು ಕೊಟ್ಟು ನಮ್ಮ ಸಂಪ್ರದಾಯ ಆಚಾರ ವಿಚಾರಗಳನ್ನು ಗೌರವಿಸಿ ಆಚರಿಸುವ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಸಾಮರಸ್ಯದ ಬದುಕನ್ನು ನಡೆಸುವ ಬಗ್ಗೆ ಹೇಳಿಕೊಡಬೇಕಿದೆ ಎಂದು ತಿಳಿಸಿದರು.
ಈ ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮವು ಕಳೆದ ಎರಡು ದಿನಗಳಿಂದಲೂ ನಡೆದುಕೊಂಡು ಬರಲಾಗಿದೆ. ಮೂರನೇ ದಿನವಾದ ಇಂದು ನಾನಾ ಹೋಮ ಹವನ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು. ಶಾಸಕ ವಿ.ಮುನಿಯಪ್ಪ ಅವರು ಕುಟುಂಬ ಸಮೇತ ದೇವಾಲಯದಲ್ಲಿ ನಡೆದ ಹೋಮ ಹವನ ಹಾಗೂ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಹಂಡಿಗನಾಳ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.