ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸುಜಾತ, ಉಪಾಧ್ಯಕ್ಷರಾಗಿ ಮಂಜುಳಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ದ್ಯಾವಮ್ಮ, ನಾರಾಯಣಮ್ಮ, ಪದ್ಮಜಾ.ಟಿ.ಎನ್. ರತ್ನಮ್ಮ, ಲಕ್ಷ್ಮಮ್ಮ, ಸರಸ್ವತಮ್ಮ, ಸರಿತ, ನಾರಾಯಣಮ್ಮ, ಮಂಜುಳಮ್ಮ, ಗಾಯಿತ್ರಿ, ಮುನಿರತ್ನಮ್ಮ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಆರ್.ರಂಗನಾಥ ತಿಳಿಸಿದ್ದಾರೆ.