Home News ವಿದ್ಯೆಯ ಜೊತೆಗೆ ಸನ್ನಡತೆ, ಸಂಸ್ಕಾರ ಹಾಗೂ ವಿವೇಕ ಅಗತ್ಯ

ವಿದ್ಯೆಯ ಜೊತೆಗೆ ಸನ್ನಡತೆ, ಸಂಸ್ಕಾರ ಹಾಗೂ ವಿವೇಕ ಅಗತ್ಯ

0
Handiganala Adichunchanagiri Sri Nirmalanandanatha Swamiji

Handiganala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್‌ ವತಿಯಿಂದ 8 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Adichunchanagiri Sri Nirmalanandanatha Swamiji) ಅವರು ಮಾತನಾಡಿದರು.

ಬರಿ ವಿದ್ಯೆ ಇದ್ದರೆ ಸಾಲದು ಸನ್ನಡತೆ, ಸಂಸ್ಕಾರ, ವಿವೇಕವು ಸಹ ಇರಬೇಕು. ಆತ್ಮವಿದ್ಯೆಯಿಂದ ಜ್ಞಾನ ಬರುತ್ತೆ, ಹೊರಗಿನ ವಿದ್ಯೆಯಿಂದ ಸಂಸ್ಕಾರ ಬೆಳೆಯುತ್ತೆ. ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯೇತರ ಓದುವಿಕೆಯು ಆಲೋಚನಾ ಪರಿಧಿಯನ್ನು ವಿಕಸನಗೊಳಿಸುತ್ತದೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇತರರಿಗೆ ಮಾದರಿಯಾಗುವಂತೆ ಸಾಧಕರಾಗಬೇಕು. ಸೇವೋಮನೋಭಾವ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮನೋಬಾವ ಬೆಳೆಸಿಕೊಳ್ಳಿ ಎಂದರು.

ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ದಾರಿ ತಪ್ಪದೇ ಸನ್ಮಾರ್ಗದಲ್ಲಿ ನಡೆದು ವಿದ್ಯಾವಂತರಾಗಿ ಕೀರ್ತಿವಂತರಾಗುತ್ತಾರೆ ಎಂದು ತಿಳಿಸಿದರು.

ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯದ ಒಕ್ಕಲಿನ ಕುಲಬಾಂಧವರ ಮಕ್ಕಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 2021-2022ನೇ ಸಾಲಿನಲ್ಲಿ ಶೇ 85 ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ಒಟ್ಟು 85 ಮಕ್ಕಳನ್ನು ಅವರ ಪೋಷಕರೊಂದಿಗೆ ಪುರಸ್ಕರಿಸಲಾಯಿತು.

ಟ್ರಸ್ಟ್‌ ನ ಅದ್ಯಕ್ಷ ಎನ್,ನಾಗರಾಜ್, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಮಂಗಳನಾಥಸ್ವಾಮೀಜಿ, ಟ್ರಸ್ಟ್ ನ ಉಪಾಧ್ಯಕ್ಷ ಆರ್.ರವಿ, ಖಜಾಂಚಿ ಮುನಿಸ್ವಾಮಿಗೌಡ, ಕಾರ್ಯದರ್ಶಿ ಅಶ್ವತ್ಥಯ್ಯ, ಚಿಕ್ಕದಾಸರಹಳ್ಳಿ ದೇವರಾಜ್, ಗೊರಮೊಡಗು ರಾಜಣ್ಣ, ಆನೂರು ಎನ್. ವಿಜಯೇಂದ್ರ, ನಿವೃತ್ತ ಶಿಕ್ಷಕ ಕೆಂಪಣ್ಣ, ಲಕ್ಷ್ಷಣ್, ಜಯರಾಮ್, ಗೋವಿಂದರಾಜ್, ರವಿಕುಮಾರ್, ಮದುಸೂಧನ್, ಲಕ್ಷ್ಮೀನಾರಾಯಣ, ರಸಿಕ ಎ.ನಾರಾಯಣಸ್ವಾಮಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version