Home News ಕಂಬದ ಆಂಜನೇಯಸ್ವಾಮಿ ಉತ್ಸವ

ಕಂಬದ ಆಂಜನೇಯಸ್ವಾಮಿ ಉತ್ಸವ

Villagers Participate in Bhajan Program and Palakki Utsav to Celebrate Temple Anniversary

0
Villagers gather at the Gummanahalli Kambadanjaneya Swamy Temple for the anniversary celebration

Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಗುಮ್ಮನಹಳ್ಳಿ ಕಂಬದಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ಗ್ರಾಮಸ್ಥರಿಂದ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು,

ಪ್ರತಿ ವರ್ಷದಂತೆ ಕಂಬದ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ, ಉತ್ಸವ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಾಯಂಕಾಲ ತನಕ ಕಲಾತಂಡದಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಮಳ್ಳೂರಾಂಭ ಕೆರೆಯ ಅಂಗಳದಲ್ಲಿ ನೆಲೆಸಿರುವ ಶ್ರೀ ಕಂಬದಾಂಜನೇಯ ಸ್ವಾಮಿ ದೇವಾಲಯದಲ್ಲಿ ಗ್ರಾಮಸ್ಥರು ಹಾಗೂ ಕುತ್ತಾಂಡಹಳ್ಳಿ, ಮಾರಪ್ಪನಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತೀರ್ಥ ಪ್ರಸಾದಗಳನ್ನು ವಿನಿಯೋಗಿಸಲಾಯಿತು.

ಭಕ್ತರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಕಂಬದಾಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವವನ್ನು ತಮಟೆ ವಾದನ ಹಾಗೂ ನಾದ ಸ್ವರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.


Devotees Gather for Special Puja on Anniversary of Gummanahalli Kambadanjaneya Swamy Temple

Devaramallur, Sidlaghatta : On Sunday, the villagers of Devaramallur in Sidlaghatta taluk gathered to perform a special puja at the Gummanahalli Kambadanjaneya Swamy Temple to celebrate its anniversary. The Anjaneyaswamy temple was adorned with Abhishekam, Utsav, and special flower decorations, as is customary every year. Additionally, an art troupe performed bhajans throughout the day.

Villagers from Sri Kambadanjaneya Swamy Temple, located in the yard of Sri Malluramba Lake, as well as those from surrounding villages such as Kuthandahalli and Marappanalli, participated in the puja program. The temple distributed Teertha Prasads to devotees, and arrangements were made to offer food to those in attendance.

To further celebrate the occasion, the Sri Kambadanjaneyaswamy Palakki Utsav was paraded through the main streets, accompanied by the playing of tamate and nada swara. The event was a joyous celebration for the villagers and devotees who attended.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version