Home News ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ

ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ

0
The Government Employees Union has called for an indefinite strike starting from March 1, demanding the revision of salaries, allowances, and the implementation of the old pension scheme.

Sidlaghatta : ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘವು ಮಾ.1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದೆ. ಆ ಪ್ರಕಾರ ಜಿಲ್ಲೆಯಲ್ಲಿಯೂ ನೌಕರರು ಮುಷ್ಕರ ನಡೆಸುವರು ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲ ಸರ್ಕಾರಿ ನೌಕರರು ಕೆಲಸ ನಿರ್ವಹಿಸದೆ ಮುಷ್ಕರ ಬೆಂಬಲಿಸುವರು ಎಂದರು.

ಬಜೆಟ್‌ನಲ್ಲಿ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇದು ನೌಕರರಲ್ಲಿ ನಿರಾಸೆ ಮೂಡಿಸಿದೆ. ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು ಜಾರಿಗೊಳಿಸಬೇಕಾಗಿತ್ತು. ಆಯೋಗದ ಮುಂದೆ ಸಂಘವು ವೇತನ, ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಮುಷ್ಕರ ಅನಿವಾರ್ಯ ಎಂದರು.

ಮಾ.1ರಿಂದ ಸರ್ಕಾರಿ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ಬೆಂಬಲಿಸುವರು. ಈ ವಿಚಾರವಾಗಿ ಸಂಘವು ಎಲ್ಲಾ ಸರ್ಕಾರಿ ಅಧಿಕಾರಿ, ನೌಕರರಲ್ಲಿ ಮನವಿ ಮಾಡಲಿದೆ ಎಂದರು.

6ನೇ ವೇತನ ಆಯೋಗದ ಮಾದರಿಯಂತೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ಪಡೆದು ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ 40ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು 2022ರ ಜುಲೈನಿಂದ ಜಾರಿಗೆ ಬರುವಂತೆ ಆದೇಶಿಸಬೇಕು ಎಂದರು.

ರಾಜ್ಯದ ಎನ್.ಪಿ.ಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಕಷ್ಟಕ್ಕೆ ಸಿಲುಕಿದೆ. ಎನ್.ಪಿ.ಎಸ್. ನೌಕರರನ್ನು ಒ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಪಂಜಾಬ್, ರಾಜಸ್ತಾನ, ಛತ್ತಿಸ್‌ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿಯೂ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದರು.

ಮುಷ್ಕರದಿಂದ ಸಾರ್ವಜನಿಕರ ಸೇವೆಗೆ ತೊಂದರೆಯಾಗುತ್ತದಾದರೂ ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸಿಕೊಂಡು ಹೋಗುತ್ತೇವೆ. ಸಾರ್ವಜನಿಕರೂ ದಯಮಾಡಿ ಸಹಕರಿಸಿ ಎಂದು ವಿನಂತಿಸಿದರು.

ಸರ್ಕಾರಿ ನೌಕರರ ತಾಲ್ಲೂಕು ಸಂಘದ ಕಾರ್ಯದರ್ಶಿ ಅಕ್ಕಲರೆಡ್ಡಿ, ಶಿಕ್ಷಕರ ಸಂಘಗಳ ಅಧ್ಯಕ್ಷ ಸಿ.ಎಂ.ಮುನಿರಾಜು, ಎಲ್.ವಿ.ವೆಂಕಟರೆಡ್ಡಿ, ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಜಯರಾಮ್, ಗುರುರಾಜರಾವ್, ಕೇಶವರೆಡ್ಡಿ, ರುದ್ರೇಶಮೂರ್ತಿ, ಆರೋಗ್ಯ ಇಲಾಖೆಯ ಶಶಿಕುಮಾರ್, ದೇವರಾಜ್, ಕಂದಾಯ ಇಲಾಖೆಯ ಅಮರೇಂದ್ರ, ವಸಂತಕುಮಾರ್, ಮಧು, ರಮಾಕಾಂತ್, ನಾರಾಯಣಸ್ವಾಮಿ, ಸಿದ್ದರಾಜು ಹಾಜರಿದ್ದರು.


Government Employees Union Calls for Indefinite Strike

Sidlaghatta : The Government Employees Union has called for an indefinite strike starting from March 1, demanding the revision of salaries, allowances, and the implementation of the old pension scheme for state government employees. The taluk president of the Government Employees Association, KN Subbareddy, announced that all the government employees of the taluk will support the strike without performing work.

At a press conference held in the city on Monday, Subbareddy stated that there was no proposal for the revision of salary and allowances of government employees in the budget, which has created frustration among the employees. Despite submitting a detailed report regarding the revision of wages and allowances before the commission, no action has been taken. As a result, a strike has become inevitable.

From March 1, government employees will support the strike by absenting themselves from work, and the association will appeal to all government officials and employees regarding the matter. According to the model of the 6th Pay Commission, an interim report should be obtained from the 7th Pay Commission as soon as possible, and the 40% fitment facility should be ordered to come into force from July 2022 before the implementation of the Election Code of Conduct.

Subbareddy emphasized that the livelihood and evening life of NPS employees in the state has become difficult. The government’s responsibility is to bring it to the fore, and the old pension scheme has already been implemented in several states. Therefore, the old pension scheme should be implemented in the state as well.

Although the strike will inevitably affect public service, Subbareddy assured that the association will make up for it in the coming days. He also requested the public to cooperate during this time.

Several members of various employee associations were present at the press conference, including Government Employees Taluk Association Secretary Akkalareddy, Teachers Association President CM Muniraju, LV Venkatareddy, NPS Employees Association President Gajendra, Jayaram, Gururaja Rao, Keshavareddy, Rudreshamurthy, Health Department Sasikumar, Devaraj, Revenue Department Amarendra, Vasantakumar, Madhu, Ramakanth, Narayanaswamy, and Siddaraj.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version