ಶಿಡ್ಲಘಟ್ಟ ತಾಲ್ಲೂಕಿನ ಗೊರಮಡಗು ಗ್ರಾಮದ ಸುಮಾರು 350 ವರ್ಷ ಪುರಾತನ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಮುಂಭಾಗ ಇರುವ ಉಟ್ಲು ಕಂಬ ಮುರಿದು ಬಿದ್ದಿದೆ.
ಶ್ರೀರಾಮನವಮಿ ಹಬ್ಬದ ದಿನದಂದು ಗೊರಮಡಗು ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳೊಂದಿಗೆ, ಗ್ರಾಮದಲ್ಲಿ ನಡೆಯುವ ಜಾತ್ರೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಈ ಜಾತ್ರೆ ನೋಡಲು ತಂಡೋಪ ತಂಡವಾಗಿ ಆಗಮಿಸುತ್ತಾರೆ. ಆ ದಿನ ನಡೆಯುವ ಉಟ್ಲು ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡು ಹೋಗುತ್ತಾರೆ. ಇಂತಹ ಇತಿಹಾಸ ಪ್ರಸಿದ್ಧ ಹೊಂದಿರುವ ವೇಣುಗೋಪಾಲ ದೇವಸ್ಥಾನದ ಉಟ್ಲು ಕಂಬವು ಇದ್ದಕ್ಕಿದ್ದ ಹಾಗೆ ಮೂರು ತುಂಡುಗಳಾಗಿ ಮುರಿದು ಬಿದ್ದಿದೆ.
ಗ್ರಾಮಕ್ಕೆ ಏನಾದರೂ ಕೆಡುಕಾಗುತ್ತದೇನೋ ಎಂದು ಕೆಲವರು ಆತಂಕಪಡುತ್ತಿದ್ದಾರೆ. ಮುಂದೆ ಊರಿಗೆ ಯಾವುದೇ ತೊಂದರೆಯಾಗದಂತೆ ಶೀಘ್ರದಲ್ಲಿಯೇ ಊರಿನ ಗ್ರಾಮಸ್ಥರು ಎಲ್ಲಾ ಒಗ್ಗೂಡಿ ಮತ್ತೊಂದು ಉಟ್ಲು ಕಂಬವನ್ನು ನಿರ್ಮಾಣ ಮಾಡಿ ದೇವಸ್ಥಾನದಲ್ಲಿ ಪೂಜೆ ಹೋಮ ಹವನಗಳನ್ನು ಮಾಡುತ್ತೇವೆ ಎಂದು ಗ್ರಾಮದ ಹಿರಿಯ ಮುಖಂಡರು ತಿಳಿಸಿದ್ದಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi