ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಶನಿವಾರ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದಾಗಿ ರೇಷ್ಮೆ ಹುಳು ಸಾಕಾಣಿಕಾ ಮನೆ ಹಾಗೂ ದ್ರಾಕ್ಷಿ ತೋಟಕ್ಕೆ ಹಾನಿಯುಂಟಾಗಿದೆ.
ಅಕ್ಕಲಪ್ಪ ಅವರಿಗೆ ಸೇರಿದ ರೇಷ್ಮೆ ಹುಳು ಸಾಕಾಣಿಕಾ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಸುಮಾರು ಆರು ಲಕ್ಷ ರೂಗಳಷ್ಟು ನಷ್ಟವಾಗಿದ್ದರೆ, ಪಕ್ಕದಲ್ಲಿಯೇ ಇರುವ ನಾರಾಯಣಮ್ಮ ಎಂಬುವವರ ಬೆಳೆ ಬಂದಿದ್ದ ದ್ರಾಕ್ಷಿ ತೋಟಕ್ಕೆ ಕೂಡ ಬೆಂಕಿ ಹರಡಿ ಸುಮಾರು ಒಂದೂವರೆ ಲಕ್ಷ ರೂಗಳಷ್ಟು ನಷ್ಟವಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ.
ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್, ಆರ್.ಐ ಪ್ರಶಾಂತ್, ಪಿಡಿಒ ಶಾರದಾ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎ.ಉಮೇಶ್, ಸಿ.ಕೆ.ಗಜೇಂದ್ರ ಬಾಬು, ಗ್ರಾಮದ ಮಾರೇಗೌಡ, ನವೀನ್ ಸ್ಥಳಕ್ಕೆ ಭೇಟಿ ನೀಡಿದ್ದರು.