
Sidlaghatta : ರೈತರು ಫ್ರೂಟ್ ತಂತ್ರಾಂಶದಲ್ಲಿ ತಮ್ಮ ಹೆಸರನ್ನು ಹಾಗೂ ಇತರೆ ಮಾಹಿತಿಯನ್ನು ದಾಖಲಿಸಲು ನವೆಂಬರ್ 30 ಕಡೆಯ ದಿನವಾಗಿದ್ದು ಎಲ್ಲ ಅರ್ಹ ರೈತರು ನಿಗತ ದಿನದೊಳಗೆ ಫ್ರೂಟ್ ತಂತ್ರಾಂಶದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಕೃಷಿ ಸಹಾಯಕ ನಿರ್ದೇಶಕ ಪಿ.ಆರ್.ರವಿ ರೈತರಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕೃಷಿ, ರೇಷ್ಮೆ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ಸಿಗುವ ಬೆಳೆ ನಷ್ಟ ಪರಿಹಾರ, ಬೆಳೆ ಸಾಲ, ಕನಿಷ್ಟ ಬೆಂಬಲ ಬೆಲೆ ಸೌಲಭ್ಯ, ಪಹಣಿಯಲ್ಲಿ ಬೆಳೆಯ ವಿವರ ದಾಖಲಾತಿ, ಬೆಳೆ ವಿಮೆ ಇನ್ನಿತರೆ ಸೌಲಭ್ಯವನ್ನು ಪಡೆಯಲು ಫ್ರೂಟ್(ಫಾಮರ್ರ್‍ಸ್ ರಿಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೇಸಿಕ್ ಇನರ್ಮೆಷನ್ ಸಿಸ್ಟಮ್)ನಲ್ಲಿ ನೋಂದಣಿ ಕಡ್ಡಾಯ ಎಂದು ಹೇಳಿದರು.
ರೈತರು ಸಂಬಂಸಿದ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪರಿಶಿಷ್ಟ ಜಾತಿ ಪಂಗಡದವರು ಜಾತಿ ಪ್ರಮಾಣ ಪತ್ರವನ್ನು ಒದಗಿಸಿ ಫ್ರೂಟ್ ಐಡಿ ನಂಬರ್ ಪಡೆಯಬೇಕು. ರೈತರು ತಮಗಿರುವ ಎಲ್ಲ ಜಮೀನುಗಳ ಪಹಣಿಗಳನ್ನು ನೋಂದಾಯಿಸಿಕೊಳ್ಳಬೇಕು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1,13,248 ಸರ್ವೆ ನಂಬರ್‌ಗಳಿದ್ದು ಇದುವರೆಗೂ 69990 ನಂಬರ್‌ಗಳಷ್ಟೆ ಫ್ರೂಟ್‌ನಲ್ಲಿ ನೋಂದಾಯಿಸಿದ್ದು ಇನ್ನುಳಿದ 43339 ನಂಬರ್‌ಗಳನ್ನು ನೋಂದಾಯಿಸಿಕೊಳ್ಳಲು ಅವರು ಮನವಿ ಮಾಡಿದ್ದು ಇಲ್ಲವಾದಲ್ಲಿ ಮೇಲಿನ ಯಾವುದೆ ಸವಲತ್ತು ಸಿಗುವುದಿಲ್ಲ ಎಂದು ತಿಳಿಸಿದರು.
ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಆರ್.ರವಿ 82962 37136, ತೋಟಗಾರಿಕೆ ಸಹಾಯಕ ನಿರ್ದೇಶಕಿ ಮಂಜುಳ 9448825101, ರೇಷ್ಮೆ ಇಲಾಖೆಯ ಚಂದ್ರಪ್ಪ 9448350272 ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿ ಆಯಾ ಹೋಬಳಿಯ ಕಂದಾಯ ನಿರೀಕ್ಷರನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.