Sidlaghatta : ನಿವೇಶನಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬ ಹಾಗೂ ಇನ್ನೊಂದು ಕುಟುಂಬದ ನಡುವೆ ಹಳೆ ದ್ವೇಷವಿದ್ದು ಈ ಕಾರಣಕ್ಕಾಗಿ ನನ್ನ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನನ್ನ ಪತಿ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದಾಗ ಪೊಲೀಸರು ಹೇಳಿಕೆ ಪಡೆದಿದ್ದಾರೆ.
ಹಾಗಾಗಿ ನನ್ನ ಪತಿಯ ಬಳಿ ಮರು ಹೇಳಿಕೆ ತೆಗೆದುಕೊಂಡು ದೂರನ್ನು ದಾಖಲಿಸಬೇಕು, ನನ್ನ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಈಧರೆ ಪ್ರಕಾಶ್ ಅವರ ಪತ್ನಿ ಸರಸ್ವತಿ ಆಗ್ರಹಿಸಿದರು.
ಶಿಡ್ಲಘಟ್ಟ ತಾಲ್ಲೂಕು ವರದನಾಯಕನಹಳ್ಳಿಯಲ್ಲಿ ನಿವೇಶನಗಳಿಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಹಳೆ ದ್ವೇಷವಿದ್ದು ನಿವೇಶನದ ಮಾಲೀಕ ಈ ಧರೆ ಪ್ರಕಾಶ್ ಮೇಲೆ ಅದೇ ಗ್ರಾಮದ ನಂಜಪ್ಪ ಹಾಗೂ ಆತನ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಈಧರೆ ಪ್ರಕಾಶ್ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.
ಈ ಬಗ್ಗೆ ಈಧರೆ ಪ್ರಕಾಶ್ ಅವರ ಪತ್ನಿ ಸರಸ್ವತಿ ಮಾಧ್ಯಮಗೋಷ್ಠಿ ನಡೆಸಿ, ನನ್ನ ಪತಿ ಮೇಲೆ ನಂಜಪ್ಪ ಮತ್ತವರ ಕುಟುಂಬದವರು ಹಲ್ಲೆ ನಡೆಸಿದ್ದು ನನ್ನ ಪತಿ ಅರೆ ಪ್ರಜ್ಞೆಯಲ್ಲಿದ್ದಾಗ ಹೇಳಿಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಾವು ಕೊಟ್ಟಿರುವ ದೂರೊಂದು ಪೊಲೀಸರು ದಾಖಲಿಸಿರುವ ದೂರು ಇನ್ನೊಂದು. ಹಾಗಾಗಿ ನನ್ನ ಪತಿ ಬಳಿ ಮರು ಹೇಳಿಕೆ ಪಡೆದು ಹೊಸದಾಗಿ ದೂರನ್ನು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ನನ್ನ ಮತ್ತು ನನ್ನ ಕುಟುಂಬದವರ ಮೇಲೆ ನಂಜಪ್ಪ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು ಮುಂದೆ ನಮಗೆ ನಮ್ಮ ಕುಟುಂಬದವರಿಗೆ ಏನಾದರೂ ಆದಲ್ಲಿ ಅದಕ್ಕೆ ನಂಜಪ್ಪನವರೆ ಕಾರಣ, ನಮಗೆ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.