Sidlaghatta : ಶಿಡ್ಲಘಟ್ಟ ನಗರದ ಕೋಟೆ ವೃತ್ತದ ತಿರುವಿನಲ್ಲಿದ್ದ ಕಂಬಕ್ಕೆ ಟಾಟಾ ಏಸ್ ಗಾಡಿ ತಗುಲಿ, ಆ ಕಂಬವು ವಿದ್ಯುತ್ ತಂತಿಗೆ ಬಿದ್ದ ಕಾರಣ ನಗರದಲ್ಲಿ ವಿದ್ಯುತ್ ಇಲ್ಲದಾಗಿತ್ತು.
ಟಾಟಾ ಏಸ್ ಗಾಡಿ ನಗರದ ಕೋಟೆ ವೃತ್ತದ ತಿರುವಿನಲ್ಲಿ ನಾಡ ಬಾವುಟ ಹಾಗೂ ರಾಷ್ಟ್ರೀಯ ಬಾವುಟ ಹಾರಿಸುವ ಕಂಬಕ್ಕೆ ತಗುಲಿ ಅದು ವಿದ್ಯುತ್ ಕಂಬಿಗಳ ಮೇಲೆ ಬಿದ್ದು ಶಾರ್ಟ್ ಆದ ಹಿನ್ನೆಲೆ ನಗರದಲ್ಲಿ ವಿದ್ಯುಚ್ಛಕ್ತಿ ಇಲ್ಲದಾಗಿತ್ತು. ಕೂಡಲೇ ಸ್ಥಳೀಯರು BESCOM ಗೆ ಸುದ್ದಿ ಮುಟ್ಟಿಸಿದ್ದು ಪೊಲೀಸರು ಹಾಗೂ ಬೆಸ್ಕಾಂ ಇಲಾಖೆಯವರು ಮುಂದಿನ ಕ್ರಮ ಕೈಗೊಂಡರು.