Sidlaghatta : ಮತದಾರರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಚಟುವಟಿಕೆಗಳನ್ನು ವಿವಿಧ ರೀತಿಯಲ್ಲಿ ನಡೆಸಿದ್ದೇವೆ. ಇದೀಗ ನಾವು ಮತದಾರರಿಗೆ ಮತದಾನ ಮಾಡುವ ಬಗ್ಗೆ ಅರಿವನ್ನು ಮೂಡಿಸುವ ಹಂತದಲ್ಲಿದೆ ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ ನಿಟ್ಟಾಲಿ ತಿಳಿಸಿದರು.
ಶಿಡ್ಲಘಟ್ಟ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಗರಸಭೆ ಹಾಗೂ ತಾಲ್ಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕ ಹಾಗೂ ನಗರಸಭೆ ಸಿಬ್ಬಂದಿಗೆ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಗೊಂದಲಗಳಿದ್ದರೆ ಸ್ಥಳೀಯ ಆಡಳಿತವನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯಲು ಆಯೋಗವು ಸಿ ವಿಜಿಲ್ ಆಪ್ ಪರಿಚಯಿಸಿದ್ದು, ಅಕ್ರಮ ಕಂಡುಬಂದಲ್ಲಿ ಜನಸಾಮಾನ್ಯರು ಕೂಡ ತಮ್ಮ ಮೊಬೈಲ್ ನಲ್ಲಿ ಆಪ್ ಮೂಲಕ ಫೋಟೋ, ವೀಡಿಯೋ, ಆಡಿಯೋಗಳನ್ನು ಕಳುಹಿಸಿದರೆ ದೂರು ದಾಖಲಾಗುತ್ತದೆ ಎಂದು ವಿವರಿಸಿದರು.
ಬ್ಯಾಂಕ್‌ಗಳಿಂದ ಭಾರಿ ಮೊತ್ತದ ಹಣ ಪಡೆಯುವುದು, ಡಿಜಿಟಲ್ ಕರೆನ್ಸಿಯಲ್ಲಿ ದೊಡ್ಡ ಮೊತ್ತದ ವಹಿವಾಟು, ಕುಕ್ಕರ್, ಮಿಕ್ಸಿ ಮತ್ತಿತರ ಗೃಹಬಳಕೆ ವಸ್ತುಗಳ ಸಗಟು ಖರೀದಿ ಹಾಗೂ ಸಾಗಣೆ ಮೇಲೆ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಿ–ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು ಎಂದರು.
80 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ಗಂಭೀರವಾದ ಕಾಯಿಲೆಗಳಿಂದ ಬಳಲುತ್ತಿರುವ ಮತದಾರರು ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು. ಅಂತಹ ಮತದಾರರು ಮೊದಲೇ ನೋಂದಣಿ ಮಾಡಿಕೊಂಡರೆ, ಅತ್ಯಂತ ಸುರಕ್ಷಿತವಾಗಿ ಮನೆಯಲ್ಲೇ ಗೋಪ್ಯ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಯುವ ಮತದಾರರನ್ನು ಮತ್ತು ಹೆಣ್ಣುಮಕ್ಕಳನ್ನು ಮತದಾನ ಕೇಂದ್ರಕ್ಕೆ ಸೆಳೆಯಲು ವಿಶೇಷ ಬೂತ್ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜಾವಿದ ನಸೀಮಾ ಖಾನಂ, ತಾಲ್ಲೂಕು ಪಂಚಾಯಿತಿ ಇಒ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಪೌರಸೇವಾ ನೌಕರರ ಸಂಘದ ಕಾರ್ಯಾಧ್ಯಕ್ಷ ಮುರಳಿ, ನಗರಸಭೆ ಕಂದಾಯ ನಿರೀಕ್ಷಕ ಅತೀಕ್ ಅಹಮದ್, ಬಿ.ಎಲ್.ಒ ಗಳು, ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.
District SVEEP Nodal Officer Addresses Civil Servants and Municipal Council Staff on Voter Awareness
Sidlaghatta : District SVEEP Nodal Officer and District Panchayat CEO Prakash G Nittali addressed civil servants and municipal council staff at a program to raise awareness about voting. The event, organized by the Municipal Council and Taluk SVEEP Committee, was held at First Class College in Sidlaghatta city on Friday.
Nittali stated that various sweep activities have been conducted to increase voter awareness and turnout, particularly in polling booths with low turnout in the 2018 assembly elections. He emphasized the importance of voting and suggested that voters seek assistance from local administration if they have any confusion.
To prevent irregularities in the upcoming assembly elections, Nittali discussed the introduction of the C Vigil app, which allows individuals to report irregularities by submitting photos, videos, and audio recordings via their mobile phones. He instructed officials to monitor large transactions, purchases, and shipments of certain household appliances, and to investigate cases of voter luring.
Nittali also highlighted that voters above 80 years of age and those suffering from serious illnesses will be permitted to vote from home if they register in advance. Additionally, a special booth will be set up to encourage young voters and girls to participate in the voting process.
Various officials, including Sidlaghatta Constituency Electoral Officer Javida Naseema Khanam and Taluk Panchayat EO and Taluk Sweep Committee Chairman G.Muniraj, were in attendance at the event.