Home News ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಡಿಜಿಟಲ್ ಲೈಬ್ರರಿ

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಡಿಜಿಟಲ್ ಲೈಬ್ರರಿ

0
Devaramallur Grama Panchayat Digital Library

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಡಿಜಿಟಲ್ ಲೈಬ್ರರಿಯನ್ನು ನಿರ್ಮಾಣ ಮಾಡುತ್ತಿದ್ದು ಜಿಲ್ಲಾ ಪಂಚಾಯಿತಿ ಎಇಇ ರಮೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ತಂಡವು ಸೋಮವಾರ ಪರಿಶೀಲನೆ ನಡೆಸಿದರು.

ಓದುವ ಶಾಲಾ ಕಾಲೇಜು ಮಕ್ಕಳಿಂದ ಹಿರಿಯವರೆಗೂ ಮಹಿಳೆಯರು ಸೇರಿ ಎಲ್ಲ ವರ್ಗದವರಿಗೂ ಇಷ್ಟವಾಗುವ ಆಸಕ್ತಿ ಇರುವ ಎಲ್ಲ ರೀತಿಯ ಸಾಹಿತ್ಯವನ್ನು ಒದಗಿಸಲಾಗುವುದು, ಅದಕ್ಕೆ ಪೂರಕವಾದ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಎಇಇ ರಮೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ನಿಧಿಯಲ್ಲಿ 2.5 ಲಕ್ಷ ರೂ.ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಾಣವಾಗುತ್ತಿದೆ. ಇಲ್ಲಿ ಟಿವಿ, ಕಂಪ್ಯೂಟರ್, ಇಂಟರ್‌ನೆಟ್, ವಿದ್ಯುತ್, ಕುಡಿಯುವ ನೀರು ಜತೆಗೆ ಓದಿಕೊಳ್ಳಲು ಪೂರಕವಾದ ವಾತಾವರಣವನ್ನು ಕಲ್ಪಿಸಲಾಗುತ್ತಿದೆ.

ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಟಿವಿಯನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಐಎಎಸ್ ಕೆಎಎಸ್‌ನಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪೂರಕವಾದ ಡಿಜಿಟಲ್ ಮಾದರಿ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ. ಗೋಡೆಗಳ ಮೇಲೆ ಚಿತ್ರಗಳು ಓದುಗ ಮಕ್ಕಳನ್ನು ಆಕರ್ಷಿಸುವಂತಿವೆ. ಮುಂದಿನ ತಿಂಗಳಲ್ಲಿ ಡಿಜಿಟಲ್ ಲೈಬ್ರರಿ ಲೋಕಾರ್ಪಣೆಗೊಳ್ಳಲಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಎಇಇ ರಮೇಶ್, ಎಂಜಿನಿಯರ್ ರವಿ, ಗ್ರಾಮಪಂಚಾಯಿತಿ ಸದಸ್ಯ ವೀರಾಪುರ ವೆಂಕಟೇಶ್, ಚಕ್ರವರ್ತಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version