ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಮ್ ನಲ್ಲಿ ಯುವಕನೊಬ್ಬನ ಶವವೊಂದು ಪತ್ತೆಯಾಗಿದ್ದು, ಜಂಗಮಕೋಟೆ ಹೋಬಳಿಯ ತೊಟ್ಟಿಬಾವಿ ಗ್ರಾಮದ ಯುವಕ ಮಂಜುನಾಥ್(21) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತೊಟ್ಟಿ ಬಾವಿ ಗ್ರಾಮದ ನಿವಾಸಿ ವೆಂಕಟೇಶ್ ರವರ ಮಗ ಮಂಜುನಾಥ್, ಮೈಕ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಮಂಜುನಾಥ್, ಎರಡು ಮೂರು ದಿನವಾದರೂ ಮನೆಗೆ ಬಾರದ ಹಿನ್ನೆಲೆ ಗಾಬರಿಗೊಂಡ ಮನೆಯವರು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಅಕ್ಟೋಬರ್ 17 ರಂದು ದೂರು ದಾಖಲು ಮಾಡಿದ್ದರು.
ಅಕ್ಟೋಬರ್ 22 ರ ಮುಂಜಾನೆ ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿ ಚೆಕ್ ಡ್ಯಾಂ ನಲ್ಲಿ ಶವವೊಂದು ಪತ್ತೆಯಾಗಿದ್ದು, ಮೃತದೇಹವನ್ನು ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ, ಕಾಣೆಯಾಗಿದ್ದ ಜಂಗಮಕೋಟೆ ಹೋಬಳಿ ತೊಟ್ಟಿಬಾವಿ ನಿವಾಸಿ ವೆಂಕಟೇಶ್ ಅವರ ಮಗ ಮಂಜುನಾಥ್ ಶವ ಎಂದು ಗುರುತಿಸಲಾಗಿದೆ. ಮೃತಪಟ್ಟು ಮೂರು ದಿನ ಕಳೆದಿದೆ ಎನ್ನಲಾಗಿದೆ.
ಮಂಜುನಾಥ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta