Home News ಕೋವಿಡ್ ಕೇರ್ ಸೆಂಟರಿನಲ್ಲಿ ರಸಮಂಜರಿ ಕಾರ್ಯಕ್ರಮ

ಕೋವಿಡ್ ಕೇರ್ ಸೆಂಟರಿನಲ್ಲಿ ರಸಮಂಜರಿ ಕಾರ್ಯಕ್ರಮ

0
Entertainment covid care life recreationcentre

ತಾಲ್ಲೂಕಿನ ಕೊಂಡಪ್ಪಗಾರಹಳ್ಳಿಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರಿನ ಆವರಣದಲ್ಲಿ ಸೋಮವಾರ ಎನ್ ಎಸ್ ಯು ಐ ಹಾಗೂ ಶಶಿಧರ್ ಮುನಿಯಪ್ಪ ಅಭಿಮಾನಿಗಳ ವತಿಯಿಂದ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವೈದ್ಯ ಡಾ. ಎಸ್.ಶ್ರೀನಾಥ್ ಮಾತನಾಡಿದರು.

ಕಲಾಪ್ರಕಾರಗಳು ಯಾವುದೇ ಆಗಿರಲಿ ಅವು ಜೀವನೋತ್ಸಾಹವನ್ನು ತುಂಬುತ್ತವೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಕಲೆಗಳು ನಮ್ಮನ್ನು ಮಾನವೀಯತೆಯ ಆವರಣದೊಳಗೆ ತಂದು ನಿಲ್ಲಿಸುತ್ತವೆ. ಸೋಂಕಿತರಿಗೆ ಧೈರ್ಯ ತುಂಬುವಾಗ ಅವರಿಗೆ ಪುಸ್ತಕಗಳನ್ನು ಓದಲು ಹೇಳುತ್ತೇವೆ. ಮೊಬೈಲ್ ನಲ್ಲಿ ಸಂಗೀತ ಆಲಿಸುವಂತೆಯೂ ಪ್ರೇರೇಪಿಸುತ್ತೇವೆ.

ಜೀವನೋತ್ಸಾಹವು ತುಂಬಿಕೊಂಡಾಗ ರೋಗದಿಂದ ಬೇಗ ಗುಣಹೊಂದಲು ಸಾಧ್ಯ. ಕೋವಿಡ್ ಕೇರ್ ಸೆಂಟರಿನಲ್ಲಿರುವ ಸೋಂಕಿತರಿಗೆ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ರಸಮಂಜರಿಯನ್ನು ಆಯೋಜಿಸಿರುವುದು ಸ್ತುತ್ಯಾರ್ಹ. ರೋಗಿಗಳು ಮಾನಸಿಕವಾಗಿ ದೃಢತೆಯನ್ನು ಹೊಂದಲು ಮತ್ತು ಜೀವನಪ್ರೀತಿಯನ್ನು ಪಡೆಯಲು ಇದು ಸಹಾಯಕ ಎಂದು ಅವರು ತಿಳಿಸಿದರು.

 ಬೇರು ಬೆವರು ಬಳಗ ಕಲಾತಂಡದ ಸೋರಪಲ್ಲಿ ಚಂದ್ರು, ದೇವರಮಳ್ಳೂರು ಮಹೇಶ್, ಚೀ ಮು ಹರೀಶ್ ಅವರ ತಂಡ ಜನಪದಗೀತೆ, ಚಲನಚಿತ್ರಗೀತೆಗಳು ಮತ್ತು ಆತ್ಮಸ್ಥೆರ್ಯ ತುಂಬುವ ಗೀತೆಗಳನ್ನು ಹಾಡುವ ಮುಖಾಂತರ ಕೋವಿಂದ್ ಉಪ ಕೇಂದ್ರದಲ್ಲಿನ ರೋಗಿಗಳು ಹಾಗೂ ಸಿಬ್ಬಂದಿಯನ್ನು ನಗಿಸುವ ಮುಖಾಂತರ ಮನರಂಜನೆ ನೀಡಿದರು. ನಂತರ ಹನ್ನೊಂದನೇ ಮೈಲಿಯಲ್ಲಿರುವ ಕೋವಿಡ್ ಕೇರ್ ಸೆಂಟರಿನ ಆವರಣದಲ್ಲಿಯೂ ರಸಮಂಜರಿ ಕಾರ್ಯಕ್ರಮವನ್ನು ನೀಡಿದರು.

  ಚಿಲಕಲನೇರ್ಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಎನ್ ಎಸ್ ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮಧು, ಯವ ಕಾಂಗ್ರೆಸ್ ನ ಸುನಿಲ್ , ಎನ್ ಎಸ್ ಎಸ್ ಯು ಐ ತಾಲ್ಲೂಕು ಕಾರ್ಯದರ್ಶಿ ಪ್ರಸನ್ನ, ಆರೋಗ್ಯ ಇಲಾಖೆಯ ಸಿಬ್ಬಂದಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಜಗದೀಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version