Hittalahalli, Sidalghatta : ಬದುಕಿನ ಉದ್ದಕ್ಕೂ ಸೇಡು ತೀರಿಸಿಕೊಳ್ಳುವ ಹಾಗೂ ವಿರೋಧಿಗಳನ್ನು ಮಣಿಸುವ ರಾಜಕೀಯ ನನಗೆ ಬೇಡ ನಿಮಗೂ ಬೇಡ. ಎಲ್ಲರೊಂದಿಗೆ ಬೆರೆತು ಪ್ರೀತಿಯಿಂದ ವಿಶ್ವಾಸದಿಂದ ಅಭಿವೃದ್ದಿಗಾಗಿ ಮಾಡುವ ರಾಜಕೀಯ ನಾನು ಮಾಡುತ್ತೇನೆ ನಿಮ್ಮೆಲ್ಲರ ಬೆಂಬಲ ನನಗಿರಲಿ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಪುಟ್ಟು ಆಂಜಿನಪ್ಪ ಅವರ ನೇತೃತ್ವದಲ್ಲಿ ಯುವ ಮಿಲನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನಾನಾ ಕಡೆಯಿಂದ ಸಾವಿರಾರು ಯುವಕರು ಯುವ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನ್ಯಾಷನಲ್ ಸ್ಟ್ರಾಂಗೆಸ್ಟ್ ಮ್ಯಾನ್ ಎಂದೇ ಜಗತ್ಪ್ರಸಿದ್ದಿಯಾದ ಮನೋಜ್ ಚೋಪ್ರ ಅವರಿಂದ ನಾನಾ ಕಸರತ್ತಿನ ಪ್ರದರ್ಶನ ಹಾಗೂ ಯುವಕರಿಗೆ ಪ್ರೇರಣೆ ನೀಡುವ ಉಪನ್ಯಾಸ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪುಟ್ಟು ಆಂಜಿನಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ನಾನು ರಾಜಕೀಯ ಮಾಡಲು ಬಂದಿಲ್ಲ. ಅದರ ಅಗತ್ಯವೂ ನನಗಿಲ್ಲ. ಅಭಿವೃದ್ದಿಗಾಗಿ ನನಗೊಮ್ಮೆ ಅವಕಾಶ ಕೊಡಿ. ನಿಮ್ಮ ನಂಬಿಕೆ ಪ್ರೀತಿ ವಿಶ್ವಾಸ ಉಳಿಸಿಕೊಂಡು ನಾನು ಕೊಟ್ಟ ಭರವಸೆಗಳನ್ನು ಈಡೇರಿಸಿದರೆ ಮಾತ್ರವೇ ನನಗೆ ರಾಜಕೀಯ ಶಕ್ತಿ ಕೊಡಿ ಇಲ್ಲವಾದರೆ ಬೇಡ ಎಂದರು.
ಕಳೆದ ಎಂಟು ವರ್ಷಗಳಿಂದ ಕೊರೊನಾದಂತ ಸಂಕಷ್ಟದಲ್ಲೂ ನಿಮ್ಮೊಂದಿಗೆ ನಾನಿದ್ದೇನೆ, ನಿಮ್ಮ ಕಷ್ಟ ಸುಖಗಳಿಗೆ ನಾನು ಸ್ಪಂಧಿಸಿದ್ದೇನೆ, ನಾನು ನಿಮ್ಮೆಲ್ಲರ ಅಣ್ಣ ತಮ್ಮ ಮಗನಾಗಿ ನಿಮ್ಮ ಸೇವೆ ಮಾಡುತ್ತೇನೆ, ಧ್ವೇಷದ ರಾಜಕಾರಣ ಬಿಟ್ಟು ಪ್ರೀತಿಯ ಅಭಿವೃದ್ದಿಯ ರಾಜಕಾರಣ ಮಾಡುತ್ತೇನೆ ಎನ್ನುವ ನಂಬಿಕೆಯಿಂದ ನನಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಬೆಳ್ಳೂಟಿ ಸಂತೋಷ್, ಹಿತ್ತಲಹಳ್ಳಿ ರಮೇಶ್, ಕಾಳನಾಯಕನಹಳ್ಳಿ ರಮೇಶ್, ಅಶ್ವತ್ಥರೆಡ್ಡಿ ಸೇರಿದಂತೆ ಅನೇಕ ಕಾಂಗ್ರೆಸ್‍ನ ನಾಯಕರು ಭಾಗವಹಿಸಿದ್ದರು.
Congress Aspirant Pledges Positive Politics for Development in Sidlaghatta
Hittalahalli, Sidalghatta : Anjinappa (Puttu), Congress ticket aspirant for the Sidlaghatta Assembly Constituency, recently hosted a youth meeting program at Kalyana Mandapam near Hittalahalli in Sidlaghatta taluk. The program was attended by thousands of youths from various parts of the constituency.
During the event, Manoj Chopra, a renowned National Strongest Man title holder, motivated the youth with a series of exercises and a motivational lecture. In his address, Puttu Anjinappa stated that he was not interested in indulging in revenge politics or giving in to opponents.
Instead, he emphasized his commitment to developing the constituency by working with everyone, fostering love and trust. “Give me political power only if I keep your trust and love and fulfill my promises. Otherwise, don’t,” he said.
He also expressed his willingness to serve the people of Shidlaghatta as their brother and son, and pledged to leave behind the politics of hatred in favor of love and development.
Numerous Congress leaders, including Belluti Santhosh, Hitthalahalli Ramesh, Kalanayakanahalli Ramesh, and Aswatthareddy, participated in the event, supporting Puttu Anjinappa’s message of positive politics and development.