ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ (Grama Panchayat Election) ಸಾರ್ವತ್ರಿಕ ಚುನಾವಣೆ – 2020 ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಗೊಳಿಸಿದ್ದು, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳ ನಿರ್ವಹಣೆ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 24/7 ದೂರು ನಿರ್ವಾಹಣಾ ಕೇಂದ್ರವನ್ನು (Complaint monitoring cell) ಸ್ಥಾಪಿಸಲಾಗಿದೆ. ಚುನಾವಣೆಗೆ ಸಂಬಂದಿಸಿದ ಎಲ್ಲಾ ಮೂಲಗಳಿಂದ ಸ್ವೀಕೃತವಾಗುವ ದೂರುಗಳನ್ನು ಕಾಲಕಾಲಕ್ಕೆ ಇತ್ಯರ್ಥಪಡಿಸಲಾಗುತ್ತದೆ.
ಸಾರ್ವಜನಿಕರು ಚುನಾವಣಾ ಸಂಬಂಧ ದೂರು ಅರ್ಜಿಯನ್ನು ದಾಖಲಿಸಲು ಈ ಕೆಳಕಂಡ ದೂರು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿ, ಚಿಕ್ಕಬಳ್ಳಾಪುರ ಜಿಲ್ಲೆ- 08156-277071,
ಚಿಕ್ಕಬಳ್ಳಾಪುರ ತಾಲ್ಲೂಕು – 08156-272564,
ಶಿಡ್ಲಘಟ್ಟ ತಾಲ್ಲೂಕು – 08158-256763,
ಗುಡಿಬಂಡೆ ತಾಲ್ಲೂಕು – 08156-261250,
ಬಾಗೇಪಲ್ಲಿ ತಾಲ್ಲೂಕು – 08150-282225,
ಚಿಂತಾಮಣಿ ತಾಲ್ಲೂಕು – 08154-252164,
ಗೌರಿಬಿದನೂರು ತಾಲ್ಲೂಕು – 8867575221