Home News ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ

ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ

BJP's Vijaya Sankalpa Yatra program in Sidlaghatta

0

Sidlaghatta : “ಅಲ್ಲಿ ಜೋಡೆತ್ತು, ಇಲ್ಲಿ ಫೈಟಿಂಗು”. ಇಂಥವರನ್ನು ನಂಬಬಾರದು. ಡಿಕೆಶಿ ಹೆಚ್ಡಿಕೆ ಜೋಡೆತ್ತುಗಳಲ್ಲ ಬದಲಿಗೆ ಕಳ್ಳೆತ್ತುಗಳು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.

 ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

  ಹದಿನಾಲ್ಕು ತಿಂಗಳು ಅಧಿಕಾರ ನಡೆಸಲು ಯೋಗ್ಯತೆಯಿಲ್ಲದೇ ಇದ್ದುದರಿಂದ ಕಾಂಗ್ರೆಸ್, ಜೆಡಿಎಸ್ ಬಿಟ್ಟು ನಮ್ಮ ಪಕ್ಣಕ್ಲೆ ಕೆಲವರು ಬಂದರು. ಅಭಿವೃದ್ದಿಯಾಗಬೇಕು ಎಂದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ನರೇಂದ್ರ ಮೋದಿಯಂತಹ ವಿಶ್ವನಾಯಕನನ್ನು ಸೋಲಿಸಲಾಗದ ರಾಹುಲ್ ಗಾಂಧಿಯ ಪಕ್ಷಕ್ಕೆ ಮತ ಯಾಕೆ ಹಾಕ್ತೀರ. ಶಿಡ್ಲಘಟ್ಟದಲ್ಲಿ ಕಮಲ ಅರಳಿದರೆ ಅಭಿವೃದ್ಧಿ ಪ್ರಾರಂಭವಾಗುತ್ತದೆ. 34 ಸಾವಿರ ಉಚಿತ ನಿವೇಶನ ಕೊಟ್ಟೆವು. ಅದರಲ್ಲಿ ಶೇ 30 ರಷ್ಟು ಮುಸ್ಲೀಮರಿದ್ದರು. ನಿಮ್ಮ ಕ್ಷೇತ್ರದಲ್ಲಿ ಈ ಉಚಿತ ನಿವೇಶನಗಳನ್ನು ನೀಡದ ಶಾಸಕರನ್ನು ನೀವು ಏಕೆ ಆಯ್ಕೆ ಮಾಡುತ್ತೀರಿ ಎಂದರು.

  ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿ, ಬಿಜೆಪಿಗೆ ಮತ ಕೊಟ್ಟರೆ ಅಭಿವೃದ್ಧಿಗೆ ಮತ ಕೊಟ್ಟಂತೆ. ಒಳ್ಳೆಯ ಅಭ್ಯರ್ಥಿಯನ್ನು ನಿಮ್ಮ ಕ್ಷೇತ್ರಕ್ಕೆ ಕೊಡುತ್ತೇವೆ. ಆ ಸಮರ್ಥ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಿ. ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಯನ್ನು ನಾನು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದರು.

 ಶಿಡ್ಲಘಟ್ಟದಲ್ಲಿ ಮುಸ್ಲೀಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಮೋದಿ ಅವರ ದೂರದರ್ಶಿತ್ವದ ಮುದ್ರಾ ಯೋಜನೆಯಡಿ ಎರಡೂವರೆ ಲಕ್ಷ ಕೋಟಿ ರೂ ಸಾಲ ನೀಡಲಾಗಿದೆ. ಅದರಲ್ಲಿ ಶೇ 68 ರಷ್ಟು ಸಾಲದ ಫಲಾನುಭವಿಗಳು ಅಲ್ಪಸಂಖ್ಯಾತರು. ಎಲ್ಲರನ್ನೊಳಗೊಂಡ ಅಭಿವೃದ್ಧಿಯನ್ನು ಪ್ರತಿಯೊಬ್ಬರ ವಿಶ್ವಾಸ ಪಡೆದು, ಪರಿಶ್ರಮದಿಂದ ಮಾಡುವುದೇ ಬಿಜೆಪಿ ಆಶಯ ಎಂದರು.

 ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ನಿವೃತ್ತರಾಗುತ್ತಾ ಮಗನನ್ನು ಚುನಾವಣೆಗೆ ನಿಲ್ಲಿಸಬಹುದೆಂದು ಅಂದುಕೊಂಡಿದ್ದೆ. ಆದರೆ ಅವರು ಶ್ರೀನಿವಾಸಪುರ ತಾಲ್ಲೂಕಿನ ಗುಳುಂ ಗೋವಿಂದೇಗೌಡನ ಹೆಸರನ್ನು ಸೂಚ್ಚಿಸಿದ್ದಾರೆ. ಅವರಿಗೂ ಶಿಡ್ಲಘಟ್ಟಕ್ಕೂ ಸಂಬಂಧವೇ ಇಲ್ಲ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಜೆಡಿಎಸ್ ನೊಂದಿಗೆ. ಹಿಂದೆ ರಾಜಣ್ಣ ಗಡ್ಡ ಬಿಟ್ಟು ಅನುಕಂಪದಿಂದ ಗೆದ್ದಿದ್ದರು. ಇದೀಗ ಅದೇ ಅನುಕಂಪದಿಂದ ಜೆಡಿಎಸ್ ಮತ ಕೇಳಲು ಬರುತ್ತಿದೆ. ಅಭಿವೃದ್ಧಿ ಮಂತ್ರ ಜಪಿಸುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದರು.

 ಶಿಡ್ಲಘಟ್ಟದಲ್ಲಿ ಜೆಡಿಎಸ್ ನಮಗಿಂತ ಮುಂದಿದೆ ಎಂಬ ಸಂಗತಿ ನಮಗೆ ಗೊತ್ತು. ಜೆಡಿಎಸ್ ಗೆದ್ದರೂ ರಾಜ್ಯದಲ್ಲಿ ಸರ್ಕಾರ ಬರುವುದಿಲ್ಲ. ಅವರು ಕಾಯುತ್ತಿರುವುದು ಸಮ್ಮಿಶ್ರ ಸರ್ಕಾರ ಮಾಡಲೆಂದು. ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಆಗುವುದಿಲ್ಲ. ಶಿಡ್ಲಘಟ್ಟಕ್ಕೆ 75 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಅನುಮೋದನೆ, ತಾಲ್ಲೂಕಿನಲ್ಲು 200 ಕೋಟಿ ರೂ ವೆಚ್ಚದಲ್ಲಿ ಉತ್ತರ ವಿಶ್ವವಿದ್ಯಾನಿಲಯ ಸ್ಥಾಪನೆ, ಜಂಗಮಕೋಟೆಯಲ್ಲಿ ಮಾಡ್ಯುಲಾರ್ ಆಸ್ಪತ್ರೆ ಸ್ಥಾಪನೆ, ಸಾದಲಿಯಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರ ಮಾಡಿರುವುದು ಬಿಜೆಪಿ ಸರ್ಕಾರ ಎಂಬುದನ್ನು ಮರೆಯದಿರಿ ಎಂದರು.

 ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಡಿಸಿಸಿ ಬ್ಯಾಂಕ್ ನುಂಗಿ ನೀರು ಕುಡಿದ ಗೋವಿಂದೇಗೌಡನನ್ನು ನಿಮ್ಮ ಶಾಸಕ ವಿ.ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂದು ಸೂಚಿಸಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್, ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕಳಿಸಿದ್ದಾರೆ. ಈ ಗೊಂದಲದಿಂದ ಕಾಂಗ್ರೆಸ್ ಮುಳುಗಿದ್ದರೆ, ಜೆಡಿಎಸ್ ಪಕ್ಷ ದೊಡ್ಡ ಗೌಡ ಮತ್ತು ಚಿಕ್ಕ ಗೌಡರಿಗೆ ಹಣ ಕೊಟ್ಟವರಿಗೆ ಟಿಕೆಟ್ ಕೊಡುತ್ತಾರೆ. ಅಭಿವೃದ್ಧಿ ಮಂತ್ರ ಪಠಿಸುವುದು ಬಿಜೆಪಿ ಮಾತ್ರ ಎಂದು ಹೇಳಿದರು.

 ರಾಹುಲ್ ಗಾಂಧಿಗೆ ಸ್ವಾಮಿ ವಿವೇಕಾನಂದ ಆದರ್ಶವಾಗಬೇಕು. ವಿದೇಶಕ್ಕೆ ಹೋಗಿ ದೇಶದ ವಿರುದ್ದ ಮಾತನಾಡುವುದು ಸರಿಯಿಲ್ಲ. ಯಾವುದೇ ಕಾರಣಕ್ಕೂ ನಾವು ಮತಾಂಧ, ನರಹಂತಕ ಟಿಪ್ಪು ಯೂನಿವರ್ಸಿಟಿ ಮಾಡಲು‌ ಬಿಡಲ್ಲ. ದೇಶದಲ್ಲಿ ಯಾರಾದರೂ ಅಹಿಂದ ವಿರೋಧಿ ಇದ್ದರೆ ಅದು‌ ಸಿದ್ದರಾಮಯ್ಯ ಮಾತ್ರ ಎಂದರು.

 ಅದ್ದೂರಿ ಮೆರವಣಿಗೆ :

 ಬಿಜೆಪಿ ಸಂಕಲ್ಪ ಯಾತ್ರೆಯು ಚಿಂತಾಮಣಿಯಿಂದ ಶಿಡ್ಲಘಟಕ್ಕೆ ಆಗಮಿಸಿದಾಗ ಆಂಜನೇಯಸ್ವಾಮಿ ದೇವಾಲಯದ ಬಳಿ ಹೂಗಳನ್ನು ಚೆಲ್ಲಿ ಸ್ವಾಗತಿಸಲಾಯಿತು.  ಕಂದಾಯ ಸಚಿವ ಆರ್. ಅಶೋಕ್, ಸಂಸದ ಮುನಿಸ್ವಾಮಿ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಯೂರ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೇವಾಕಾರ್ಯಗಳನ್ನು ನಡೆಸಲು ನಿರ್ಮಿಸಿರುವ “ಸೇವಾ ಸೌಧ”ವನ್ನು ಉದ್ಘಾಟಿಸಿ, ಪೂಜೆಯಲ್ಲಿ ಪಾಲ್ಗೊಂಡರು.

 ಮಯೂರ ವೃತ್ತದಿಂದ ಬಿಜೆಪಿ ಸಂಕಲ್ಪ ಯಾತ್ರೆಯ ಮೆರವಣಿಗೆಯನ್ನು ಕೋಟೆ ವೃತ್ತದವರೆಗೂ ಕೊಂಡೊಯ್ಯಲಾಯಿತು. ಗಣ್ಯರಿಗೆ ಕ್ರೇನ್ ನಲ್ಲಿ ಬೃಹತ್ ಹೂಹಾರ ಹಾಕಿ, ಹೂಚೆಲ್ಲಿ, ಪಟಾಕಿ ಸಿಡಿಸುತ್ತಾ, ಹಲವಾರು ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕೋಟೆ ವೃತ್ತದವರೆಗೂ ಕರೆದೊಯ್ಯಲಾಯಿತು.

 ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಆರ್.ದೇವೇಗೌಡ, ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ,  ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್, ಗ್ರಾಮಾಂತರ ಅಧ್ಯಕ್ಷ ಸುರೇಂದ್ರಗೌಡ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ, ಸೀಕಲ್ ರಾಮಚಂದ್ರಗೌಡ, ದೇವರಾಜ್, ಮಂಜುನಾಥರೆಡ್ಡಿ, ಪಿಳ್ಳಮುನಿಸ್ವಾಮಪ್ಪ ಹಾಜರಿದ್ದರು.

BJP leader Seikal Ramachandra Gowda inaugurated the "Seva Soudha" at Mayura Circle Shidlaghatta and dignitaries offered puja.
ಶಿಡ್ಲಘಟ್ಟದಲ್ಲಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಯೂರ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸೇವಾಕಾರ್ಯಗಳನ್ನು ನಡೆಸಲು ನಿರ್ಮಿಸಿರುವ “ಸೇವಾ ಸೌಧ”ವನ್ನು ಉದ್ಘಾಟಿಸಿ ಪೂಜೆ ಸಲ್ಲಿಸಿದ ಗಣ್ಯರು

BJP’s Vijaya Sankalpa Yatra program in Sidlaghatta

Revenue Minister R. Ashok of the BJP party has criticized former Karnataka Chief Ministers HD Kumaraswamy and DK Shivakumar, stating that “such people should not be trusted”. The comments were made during the BJP’s Vijaya Sankalpa Yatra program at Kote Circle in the city on Tuesday evening.

Ashok went on to claim that many people had left the Congress and JDS to join the BJP because they were not fit to hold power for even fourteen months. He urged voters to support the BJP candidate in the upcoming elections, stating that “to be developed is to win the BJP candidate,” and questioned why anyone would vote for “Rahul Gandhi’s party,” which he claimed cannot defeat a “world leader like Narendra Modi.”

Health Minister Dr. Sudhakar also spoke at the event, promising voters that voting for the BJP would lead to development and pledging to work for the development of Shidlaghatta constituency alongside the elected BJP candidate.

Responding to claims that Muslims would not vote for the BJP, Dr. Sudhakar highlighted that under Modi’s Mudra scheme, two and a half lakh crores of loans had been given, with 68% of loan beneficiaries being from minority communities. He stated that the BJP’s aim is to achieve inclusive development by gaining everyone’s trust and working hard.

MP S. Muniswamy criticized the Congress and JDS parties, stating that the BJP is the only party that “chants the mantra of development.” He also accused the Congress of being “overwhelmed by confusion” and claimed that the JDS would give tickets to those who had given money to “Big Gowda and Little Gowda.”

The BJP Sankalpa Yatra procession, which arrived in Sidlaghatta from Chintamani, was welcomed with flower showers near the Anjaneyaswamy temple. Several BJP leaders, including Revenue Minister R. Ashok, MP Muniswamy, and Health Minister Dr. K. Sudhakar, participated in the procession, which was accompanied by troupes, whooping, and firecrackers.

Legislative Council members Chalavadi Narayanaswamy, R. Deve Gowda, and Brahmin Corporation Board President Sachidanandamurthy were among the other dignitaries present at the event.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version