Sidlaghatta : ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿ ಸೀಕಲ್ ರಾಮಚಂದ್ರೇಗೌಡರು ನಿರ್ಮಿಸಿರುವ ಬಿಜೆಪಿಯ ಸೇವಾ ಸೌಧ ಕಚೇರಿಯನ್ನು ಭಾನುವಾರ ಉದ್ಘಾಟಿಸಲಾಯಿತು. ಕಚೇರಿಯಲ್ಲಿ ವಿಶೇಷ ಪೂಜೆ ಪುನಸ್ಕಾರ ಹೋಮ ಹವನಗಳನ್ನು ನಡೆಸಿ ಲೋಕಾರ್ಪಣೆ ಮಾಡಲಾಯಿತು.
ಉದ್ಘಾಟನೆಯನ್ನು ನೆರವೇರಿಸಿದ ಶಿಡ್ಲಘಟ್ಟ ವಿಧಾನಸಭೆ ಟಿಕೇಟ್ ಆಕಾಂಕ್ಷಿ ಸೀಕಲ್ ರಾಮಚಂದ್ರೇಗೌಡ ಮಾತನಾಡಿ, ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಎಲ್ಲ ಚಟುವಟಿಕೆಗಳಿಗೂ ಈ ಸೇವಾ ಸೌಧ ಆಶ್ರಯವಾಗಲಿದೆ ಎಂದರು.
ಕ್ಷೇತ್ರದಲ್ಲಿನ ಬಿಜೆಪಿಯ ಎಲ್ಲ ನಾಯಕರನ್ನು ಒಟ್ಟುಗೂಡಿಸಿಕೊಂಡು ಪಕ್ಷವನ್ನು ಇನ್ನಷ್ಟು ಸಂಘಟಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ನಾವೆಲ್ಲರೂ ಒಟ್ಟುಗೂಡಿ ಮಾಡುವಂತ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆಂದರು.
ಮಾರ್ಚ್ 14ರಂದು ಶಿಡ್ಲಘಟ್ಟ ತಾಲೂಕಿಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಆಗಮಿಸಲಿದ್ದು ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ದತೆಗಳನ್ನು ನಡೆಸಿದ್ದು ಸಾವಿರಾರು ಬಿಜೆಪಿಯ ಕಾರ್ಯಕರ್ತರು ಯಾತ್ರೆಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಎಂದು ವಿವರಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ರಘು, ನಂದೀಶ್, ಸ್ಕೂಲ್ ದೇವರಾಜ್, ಆನಂದಗೌಡ, ನರ್ಮದಾರೆಡ್ಡಿ ಸೇರಿ ತಾಲೂಕು ಜಿಲ್ಲಾ ಹಾಗೂ ರಾಜ್ಯದ ಕೆಲ ನಾಯಕರು ಭಾಗವಹಿಸಿದ್ದರು.
BJP’s Seva Soudha Office Inaugurated in Sidlaghatta
Sidlaghatta : The Bharatiya Janata Party’s (BJP) Seva Soudha office, constructed by Seekal Ramachandre Gowda, was inaugurated in Sidlaghatta town on Sunday. The office was the site of a special puja, Punaskara Homa Havans, and Lokarpan ceremony.
Seekal Ramachandre Gowda, an aspiring candidate for the Sidlaghatta assembly ticket, presided over the inauguration and emphasized that the building would serve as a hub for all BJP activities in the constituency. He further stated that he aims to unite all BJP leaders in the area and work diligently to bring the party to power in the upcoming days.
The BJP’s Vijaya Sankalpa Yatra is scheduled to arrive in Sidlaghatta taluk on March 14, and the party has made all necessary arrangements to welcome the yatra with pomp and grandeur. Thousands of BJP workers are reportedly ready to receive the yatra.
The event was attended by several prominent leaders, including former MLA M. Rajanna, and BJP leaders Surendra Gowda, Raghu, Nandish, School Devaraj, Anand Gowda, and Narmada Reddy, among others. Representatives from the Taluk District and State also participated in the ceremony.