ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಜೆ.ಎಸ್.ಭರತ್ ಮತ್ತು ಸ್ನೇಹಿತರು, ಕ್ಯಾನ್ಸರ್ ನಿಂದ ಬಳಲುತ್ತಿರುವ ನಗರದ ಗಾಂಧಿನಗರದ ನಿವಾಸಿ ಆದಿಲಕ್ಷ್ಮಮ್ಮ ಅವರಿಗೆ ಐದು ಸಾವಿರ ರೂಗಳ ಆರ್ಥಿಕ ನೆರವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಜೆ.ಎಸ್.ಭರತ್, “ಆದಿಲಕ್ಷ್ಮಮ್ಮ ಅವರಿಗೆ ಒಬ್ಬ ಬುದ್ದಿಮಾಂಧ್ಯ ಮಗನಿದ್ದು ಸಂಸಾರ ನಡೆಸಲು ಅಶಕ್ತರಾಗಿರುವುದರಿಂದ ಅವರ ಮಗನಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೋಡಿಸುವ ಪ್ರಯತ್ನ ಮಾಡುತ್ತೇವೆ” ಎಂದರು.
ಆದಿಲಕ್ಷ್ಮಮ್ಮ ಅವರಿಗೆ ಔಷಧೀಯ ವೆಚ್ಚಕ್ಕಾಗಿ ಯುವ ಮೋರ್ಚಾ ಅಧ್ಯಕ್ಷ ಜೆ.ಎಸ್.ಭರತ್ ಅವರು, ಪ್ರತಿ ತಿಂಗಳು 10 ನೇ ತಾರೀಖಿನಂದು ಒಂದು ಸಾವಿರ ರೂಪಾಯಿಗಳನ್ನು ಕೋಡುವುದಾಗಿ ತಿಳಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ನಗರ ಘಟಕ ಅಧ್ಯಕ್ಷ ಸುಹೇಲ್ ಸಾಮ್ರಾಟ್, ಶಿಕ್ಷಕ ಆರ್.ನಾಗರಾಜು, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮುಖೇಶ್, ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠ ಸಹ ಸಂಚಾಲಕ ನಾಗೇಶ್, ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಮಂಜು ಕಿರಣ್, ಸಾಯಿಶ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi