Home News ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ : ಮಾಳವಿಕಾ ಅವಿನಾಶ್

ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ : ಮಾಳವಿಕಾ ಅವಿನಾಶ್

Malavika Avinash highlights the role of women in shaping the country's progress at the Women convention

0
Malavika Avinash highlights the role of women in shaping the country's progress

Sidlaghatta : ಸೀರೆ ಮತ್ತು ಕುಕ್ಕರ್‌ಗೆ ಮರುಳಾಗಿ ಮಹಿಳೆಯರು ಮತ ಹಾಕಬೇಡಿ, ಬದಲಿಗೆ ದೇಶದ ಅಭಿವೃದ್ದಿಯನ್ನು ಮನದಲ್ಲಿಟ್ಟುಕೊಂಡು ಯೋಚಿಸಿ ಮತದಾನ ಮಾಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರೆ ಮಾಳವಿಕಾ ಅವಿನಾಶ್ ಹೇಳಿದರು.

ಶಿಡ್ಲಘಟ್ಟ ನಗರದ ಬಿಜೆಪಿ ಕಚೇರಿಯಲ್ಲಿನ ಸೇವಾ ಸೌಧದಲ್ಲಿ ಗುರುವಾರ ನಡೆದ “ಮಹಿಳೆಯರ ಚಿಂತನ ಮಂಥನ” ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು,

ದೇಶದ ಅಭಿವೃದ್ದಿಯಲ್ಲಿ ಇಂದು ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಆಳ್ವಿಕೆ ಮಾಡುವ ರಾಜಕಾರಣಿಗಳನ್ನು ಆಯ್ಕೆ ಮಾಡುವಲ್ಲಿಯೂ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುವುದರಿಂದ ಪ್ರಜ್ಞಾವಂತಿಕೆಯಿಂದ ಯೋಚಿಸಿ ಮತದಾನ ಮಾಡಬೇಕು ಎಂದರು.

ಭಾರತದಲ್ಲಿ ಮಹಿಳೆಯರ ಸಾಮಾಜಿಕ ಸ್ಥಿತಿ ಸುಧಾರಣೆ ಮಾಡಲು ಮನೆಗೊಂದು ಶೌಚಾಲಯ ನಿರ್ಮಿಸುವುದು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಹಣ ನೇರವಾಗಿ ತಲುಪುವಂತೆ ಮಾಡಲು ಪ್ರತಿಯೊಬ್ಬರು ಬ್ಯಾಂಕ್ ಖಾತೆ ತೆರೆಯುವಂತಾಗಲು ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕಾಯಿತು.

ಅಡುಗೆ ಮನೆಯನ್ನು ಸೌದೆ ಒಲೆ ಮುಕ್ತಮಾಡಲು ಪ್ರತಿ ಗ್ರಾಮೀಣ ಭಾಗಕ್ಕೂ ಅಡುಗೆ ಅನಿಲ ತಲುಪುವಂತೆ ಮಾಡಿರುವುದು, ಪ್ರತಿ ಮನೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು, ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ಸಾಲ, ಶೌಚಾಲಯ ಮುಕ್ತ ಗ್ರಾಮಗಳು ಮುಂತಾದ ಅಭಿವೃದ್ಧಿ ದೃಷ್ಟಿಯ ಯೋಜನೆಗಳು ಬಿಜೆಪಿಯ ಕೊಡುಗೆ. ಇವುಗಳನ್ನು ಮಹಿಳೆಯರು ಅರಿತುಕೊಂಡು ಬಿಜೆಪಿ ಅಭ್ಯರ್ಥಿ ರಾಮಚಂದ್ರ ಗೌಡರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿ. ಕೇಂದ್ರ ಮತ್ತು ರಾಜ್ಯದಲ್ಲಿ ಇರುವಂತೆ, ಶಿಡ್ಲಘಟ್ಟದಲ್ಲಿ ಬಿಜೆಪಿ ಸರ್ಕಾರವನ್ನು ಪ್ರತಿನಿಧಿಸುವವರು ಇದ್ದರೆ, ಶಿಡ್ಲಘಟ್ಟದ ಅಭಿವೃದ್ಧಿ ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ನಿಮಗೆಲ್ಲ ತಲುಪಲು ಸಾಧ್ಯ. ಯಾವುದೆ ಆಮೀಷಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು.

ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ಸರ್ಕಾರದ ಯೋಜನೆಗಳಿಗೆ ವೇಗ ನೀಡಬೇಕು. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ ಇಡಿ ವಿಶ್ವಕ್ಕೆ ಮಾದರಿಯಾಗಿದೆ. ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯುತ್ತಿದ್ದು ಇದರಿಂದ ಬಡವರು ನಿರಾಳರಾಗಿದ್ದಾರೆ ಎಂದು ಹೇಳಿದರು.

ಆಂದ್ರಪ್ರದೇಶ ಬಿಜೆಪಿ ಉಪಾಧ್ಯಕ್ಷೆ ಮಾಲತಿ ರಾಣಿ ಮಾತನಾಡಿ, ಶಿಡ್ಲಘಟ್ಟದ ರೇಷ್ಮೆ ಇಡಿ ವಿಶ್ವದಲ್ಲಿ ಹೆಸರು ಮಾಡಿದೆ. ಆದರೂ ಇಲ್ಲಿನ ಮಹಿಳೆಯರ ಸ್ಥಿತಿ ಇಂದಿಗೂ ಉತ್ತಮವಾಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಶೌಚಾಲಯಗಳಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ರಾಜಕಾರಣದಲ್ಲಿ ಬದಲಾವಣೆ ಆಗಬೇಕಾಗಿದೆ ಎಂದರು.

ಸ್ವಾತಂತ್ರ ಬಂದಾಗಿನಿಂದಲೂ ಮಹಿಳೆಯರ ಸ್ಥಿತಿಯಲ್ಲಿ ಯಾವುದೆ ಬದಲಾವಣೆ ಆಗಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಆತ್ಮ ನಿರ್ಭರ ಭಾರತ, ಸ್ವಚ್ಚ ಭಾರತ ಕಾರ್ಯಕ್ರಮ ತಂದ ನಂತರ ಮಹಿಳೆಯರ ಸಾಮಾಜಿಕ ಸ್ಥಿತಿ ಸುಧಾರಣೆಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿರುವ ಮತದಾರ ಬಿಜೆಪಿ ಗೆಲ್ಲಿಸಲು ಈಗಾಗಲೆ ನಿರ್ಧಾರ ಮಾಡಿದ್ದಾರೆ ಎಂದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ತ್ರಿವೇಣಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ನರ್ಮದಾ ರೆಡ್ಡಿ ಹಾಜರಿದ್ದರು.


BJP State Spokesperson Urges Women to Vote for Development, Not Material Incentives

Sidlaghatta : BJP State Spokesperson Malavika Avinash emphasized the importance of women voting based on the development of the country rather than being swayed by material incentives such as sarees and Cookers. Speaking at the Women convention held at the BJP office in Sidlaghatta city, she highlighted the crucial role of women in electing political representatives and urged them to make informed choices.

Avinash pointed out various initiatives undertaken by the Narendra Modi-led BJP government to enhance the social status of women in India. These included opening bank accounts to facilitate direct government fund transfers to marginalized individuals and providing toilets for households. She also mentioned the BJP’s efforts in projects like distributing cooking gas in rural areas to eliminate wood stoves, ensuring access to clean drinking water through the Jal Jeevan Mission scheme, providing bank loans under the Mudra scheme, and promoting toilet-free villages. Avinash attributed the victory of BJP candidate Ramachandra Gowda in Vidhana Soudha to the recognition of these contributions by women voters.

Furthermore, Avinash highlighted the potential for development in Shidlaghatta, emphasizing that having representatives from the BJP at both the central and state levels would enable progress in the region. She urged women not to be swayed by temptations and stressed the importance of supporting the BJP in the upcoming elections to expedite government projects. Avinash also praised the Ayushman Bharat Yojana, a healthcare scheme implemented by the BJP government, which provides free treatment up to five lakh rupees for the benefit of the poor.

Malathi Rani, Andhra Pradesh BJP Vice President, joined Avinash in calling for political change in Shidlaghatta. She highlighted the contrast between the international recognition received by Shidlaghatta silk and the less favorable conditions faced by women in rural areas, particularly the lack of access to toilets. Rani credited Prime Minister Narendra Modi’s initiatives, such as Atma Nirbhar Bharat and the Swachh Bharat program, with improving the social status of women and urged them to contribute to further development by voting for the BJP in Karnataka.

Surendra Gowda, Chairman of the Sidlaghatta Rural Mandal, introduced the convention and expressed confidence in the BJP’s victory, stating that voters prioritizing development had already decided to support the party. The event was attended by Mahila Morcha President Triveni and District Secretary Narmada Reddy.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version