Home News ದ್ವಿತಳಿ ರೇಷ್ಮೆಗೂಡು ಬೆಳೆಯಲು ತರಬೇತಿ

ದ್ವಿತಳಿ ರೇಷ್ಮೆಗೂಡು ಬೆಳೆಯಲು ತರಬೇತಿ

0
Sidlaghatta Bivoltine Silk Cocoon Rearing Farming Training

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದಲ್ಲಿ ದ್ವಿತಳಿ ರೇಷ್ಮೆಬೆಳೆಗಾರ ಕೇಶವಮೂರ್ತಿ ಅವರ ಹುಳು ಸಾಕಾಣಿಕೆ ಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ದ್ವಿತಳಿ ರೇಷ್ಮೆಗೂಡು ಬೆಳೆಯಲು ರೈತರಿಂದ ರೈತರಿಗೆ ತರಬೇತಿ ಕಾರ‍್ಯಕ್ರಮದಲ್ಲಿ ರೇಷ್ಮೆ ಇಲಾಖೆ ಉಪನಿರ್ದೆಶಕ ಆಂಜನೇಯಗೌಡ ಮಾತನಾಡಿದರು.

ಈ ಭಾಗದಲ್ಲಿನ ವಾತಾವರಣವು ಮಿಶ್ರತಳಿ ಹಾಗೂ ದ್ವಿತಳಿ ರೇಷ್ಮೆಗೂಡು ಬೆಳೆಯಲು ಸೂಕ್ತವಾಗಿದೆ. ರೈತರು ಮನಸ್ಸು ಮಾಡಬೇಕಷ್ಟೆ. ಆದರೆ ರೈತರು ಅಪ್ಪ ಹಾಕಿದ ಆಲದ ಮರ ಎಂಬಂತೆ ಮಿಶ್ರತಳಿಯ ರೇಷ್ಮೆಗೂಡು ಬೆಳೆಯಲು ಮಾತ್ರ ಸೀಮಿತವಾಗಿರುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಮಿಶ್ರತಳಿಯ ರೇಷ್ಮೆಗೂಡಿಗಿಂತಲೂ ದ್ವಿತಳಿ ರೇಷ್ಮೆಗೂಡಿಗೆ ಜಾಗತಿಕವಾಗಿ ಬೇಡಿಕೆಯೂ ಬೆಲೆಯೂ ಸಿಗಲಿದೆ ಹಾಗಾಗಿ ರೈತರು ದ್ವಿತಳಿ ರೇಷ್ಮೆಗೂಡು ಬೆಳೆಯಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.

ಕೋಲಾರದ ಬಂಗಾರಪೇಟೆಯಲ್ಲಿ ಬಹುತೇಕ ರೈತರು ದ್ವಿತಳಿ ರೇಷ್ಮೆಗೂಡು ಬೆಳೆಯುತ್ತಿದ್ದು ಕೂಲಿಗಾರರ ಅವಲಂಬನೆ ಕಡಿಮೆ, ಗೂಡಿನ ಬೆಲೆ ಅಧಿಕವಾಗಿದ್ದು ರೈತರಿಗೆ ಲಾಭದಾಯಕವಾಗಿದೆ ಎಂದು ದ್ವಿತಳಿ ರೇಷ್ಮೆಗೂಡು ಬೆಳೆಯುವುದರಿಂದ ಸಿಗುವ ಲಾಭಗಳ ಬಗ್ಗೆ ವಿವರಿಸಿದರು.

ಕೃಷಿ ಉಪನಿರ್ದೆಶಕಿ ಡಾ.ಅನುರೂಪ ಮಾತನಾಡಿ, ಬೆಳೆ ಸಮೀಕ್ಷೆಯನ್ನು ಎಲ್ಲ ರೈತರು ತಪ್ಪದೆ ಮಾಡಿಸಬೇಕು. ಫ್ರೂಟ್ಸ್ ಆಪ್‌ನಲ್ಲಿ ರೈತರ ಬೆಳೆ ನಮೂದು ಆದರೆ ಮಾತ್ರವೇ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗಲಿವೆ ಎಂದರು.

ಜಿಲ್ಲೆಯಲ್ಲಿ ಶೇ 80 ರಷ್ಟು ಬೆಳೆ ಸಮೀಕ್ಷೆ ಮುಗಿದಿದ್ದು ಇನ್ನುಳಿದ ರೈತರು ಬೆಳೆ ಸಮೀಕ್ಷೆ ಮಾಡಿಸಬೇಕೆಂದು ಮನವಿ ಮಾಡಿದರು.

ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಶಿಧರ್ ಮಾತನಾಡಿ, ಹಿಪ್ಪುನೇರಳೆ ಬೆಳೆಗೆ ತಗಲುವ ಎಲೆ ಸುರುಳಿ ರೋಗ ಸೇರಿ ಹಲವು ರೋಗಗಳ ಬಗ್ಗೆ ವಿವರಿಸಿ ಆ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಜೈವಿಕ ಕ್ರಮಗಳು, ಸಿಂಪಡಿಸಬೇಕಾದ ರಾಸಾಯನಿಕಗಳ ಬಗ್ಗೆ ವಿವರಿಸಿದರು.

ಕುರುಬೂರು ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಡಾ.ಮಹೇಶ್ ಮಾತನಾಡಿ, ಹಿಪ್ಪುನೇರಳೆ ಸೊಪ್ಪನ್ನು ಸಾಲು ಪದ್ದತಿಯಲ್ಲಿ ಸಾಕಷ್ಟು ಅಂತರ ನೀಡಿ ನಾಟಿ ಮಾಡುವುದರಿಂದ ರೋಗಗಳು ಬಾಧಿಸುವುದು ಕಡಿಮೆ ಹಾಗೂ ನಿಯಂತ್ರಣವೂ ಸುಲಭ ಎಂದರು.

ದ್ವಿತಳಿ ರೇಷ್ಮೆ ಗೂಡು ಬೆಳೆಯುವ ಪ್ರಗತಿಪರ ರೈತರಾದ ಅಬ್ಲೂಡು ದೇವರಾಜ್, ಮಳಮಾಚನಹಳ್ಳಿ ಪ್ರೇಮ್‌ಕುಮಾರ್ ಅವರು, ದ್ವಿತಳಿ ರೇಷ್ಮೆಗೂಡು ಬೆಳೆದು ಯಶಸ್ವಿಯಾದ ಬಗ್ಗೆ ತಮ್ಮ ಅನಿಸಿಕೆ ಅನುಭವಗಳನ್ನು ಹಂಚಿಕೊಂಡರು.

ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ವಿಸ್ತರಣಾಕಾರಿ ಶಾಂತರಸ, ತಾಂತ್ರಿಕ ಸಿಬ್ಬಂದಿ ಜಗದೇವಪ್ಪ, ಮುನಿರಾಜು, ತಿಮ್ಮಪ್ಪ, ಕೃಷಿ ಆತ್ಮ ವಿಭಾಗದ ಅಶ್ವತ್ಥನಾರಾಯಣ್, ಪ್ರಗತಿಪರ ರೈತರಾದ ಕೇಶವಮೂರ್ತಿ, ಸುರೇಂದ್ರಗೌಡ, ಹಿತ್ತಲಹಳ್ಳಿ ಸುರೇಶ್, ಗ್ರಾಮ ಪಂಚಾಯಿತಿ.ಸದಸ್ಯ ಮಂಜುನಾಥ್, ರೈತ ಉತ್ಪಾದಕ ಕಂಪನಿಯ ಸಿಇಒ ಜನಾರ್ಧನ್ ಮೂರ್ತಿ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version