Sidlaghatta : ಶಿಡ್ಲಘಟ್ಟ ಉಪಕೇಂದ್ರ ಹಾಗೂ ಮೇಲೂರು ಉಪಕೇಂದ್ರಗಳ ನಡುವೆ ಇರುವ 66 ಕೆ.ವಿ ಲೈನಿನ ಗೋಪುರ ಸಂಖ್ಯೆ 14 ಮತ್ತು 15 ರಲ್ಲಿ ಡಬಲ್ ಸ್ಟ್ರಿಂಗ್ ಇನ್ಸುಲೇಟರ್ ಅಳವಡಿಸುವ ಕಾಮಗಾರಿಯು ಡಿಸೆಂಬರ್ 29 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಈ ಉಪಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಚೌಡಸಂದ್ರ, ಹಿತ್ತಲಹಳ್ಳಿ, ಬೆಳ್ಳೂಟಿ, ಬೋದಗೂರು ಹಂಡಿಗನಾಳ, ಕೇಶವಪುರ, ನೆಲಮಾಕನಹಳ್ಳಿ, ಕೇಶವಾರ, ಯಲಹಳ್ಳಿ ಹಾಗೂ ಅಪ್ಪೇಗೌಡನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು BESCOM ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಎಂ.ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.