Home News ಗೌಡನಹಳ್ಳಿ ಸರ್ಕಾರಿ ಶಾಲೆಗೆ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಭೇಟಿ

ಗೌಡನಹಳ್ಳಿ ಸರ್ಕಾರಿ ಶಾಲೆಗೆ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಭೇಟಿ

0
Basavaraja Horatti Visit Sidlaghatta Gowdanahalli Government School

Gowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಗುರುವಾರ ಭೇಟಿ ನೀಡಿದ್ದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಸವರಾಜ ಹೊರಟ್ಟಿ ಅವರು ಸಮೀಪದಲ್ಲೇ ಇದ್ದ ಸರ್ಕಾರಿ ಶಾಲೆಗೆ ಬೇಟಿ ನೀಡಿದರು.

ಗೌಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ದಾನಿಗಳ ನೆರವಿನಿಂದ ಶಾಲಾ ವಾಹನವನ್ನು ನಿರ್ವಹಣೆ ಮಾಡುತ್ತಿರುವುದು, ಶಾಲೆಯ ಅಭಿವೃದ್ಧಿ, ಎಸ್ ಡಿ ಎಂ ಸಿ ಮತ್ತು ಪೋಷಕರ ಸಹಕಾರ, ಮಕ್ಕಳ ದಾಖಲಾತಿ ದಾನಿಗಳ ಸಹಕಾರ ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

“ಒಂದು ಉತ್ತಮವಾದ ಸರ್ಕಾರಿ ಶಾಲೆಗೆ ಬೇಟಿ ನೀಡಿದ್ದರಿಂದಾಗಿ ನನಗೆ ತುಂಬಾ ಸಂತೋಷ ಆಯಿತು. ಶಾಲೆ ಮತ್ತು ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತಿರುವ ಎಲ್ಲಾ ಶಿಕ್ಷಕರ ಬಳಗಕ್ಕೆ ನನ್ನ ಅಭಿನಂದನೆಗಳು. ಈ ಶಾಲೆಯ ಅಭಿವೃದ್ಧಿಗೆ ನೆರವು ನೀಡುತ್ತಿರುವ ಎಲ್ಲ ದಾನಿಗಳಿಗೆ ಶುಭವಾಗಲಿ. ಮತ್ತೊಮ್ಮೆ ನಾನು ಈ ಶಾಲೆಗೆ ಬೇಟಿ ನೀಡುತ್ತೇನೆ” ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

“ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ದಾನಿಗಳಿಂದ ಬಸ್ ಪಡೆದು ಪೋಷಕರ ಸಹಕಾರದೊಂದಿಗೆ ನಿರ್ವಹಣೆ ಮಾಡುತ್ತಿರುವುದು ಮೆಚ್ಚುವಂತಹ ಕಾರ್ಯ. ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ. ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಸರ್ಕಾರದ ಗಮನಸೆಳೆಯುತ್ತೇನೆ. ಈ ಶಾಲೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಮಕ್ಕಳ ಕಲಿಕೆಗೆ ಇಲ್ಲಿ ಉತ್ತಮ ಪರಿಸರ ಇದೆ. ನಿಮಗೆ ನಾನು ಬೆಂಗಳೂರಿಗೆ ಹೋದ ಮೇಲೆ ಅಭಿನಂದನಾ ಪತ್ರವನ್ನು ಕಳುಹಿಸಿಕೊಡುತ್ತೇನೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ನಿವೃತ್ತ ಉಪ ತಹಸೀಲ್ದಾರ್ ಜಿ. ಎ. ನಾರಾಯಣಸ್ವಾಮಿ, ಉಸಿರು ಚಾರಿಟೆಬಲ್ ಟ್ರಸ್ಟಿನ ಡಾ. ಎನ್. ಆರ್. ದಿಲೀಪ್ ಕುಮಾರ್, ಡಾ. ಸುಮಂತ್, ಮುಖ್ಯ ಶಿಕ್ಷಕ ಎಂ. ದೇವರಾಜ, ಶಿಕ್ಷಕರಾದ ವಿ. ಎ. ಮಂಜುನಾಥ, ಎಸ್. ಎ. ನಳಿನಾಕ್ಷಿ ಎಚ್. ಬಿ. ಕೃಪ , ಎ. ಮಂಜುನಾಥ, ಡಿ. ದಿವ್ಯ ,ಕೆ. ಬಿ. ಗಾಯಿತ್ರಿ, ಎಸ್. ಎ. ವಿದ್ಯಾರಾಣಿ, ಅಂಗನವಾಡಿ ಶಿಕ್ಷಕಿ ಬಿ. ಮಂಜುಳ, ಬೈರಕ್ಕ ಅಡುಗೆಯವರಾದ ಯಶೋದ, ಗಾಯಿತ್ರಿ, ಶಾರದಾ, ಸಿಬ್ಬಂದಿ ಗಾಯಿತ್ರಿ, ಸಿ ಆರ್ ಪಿ ಬಾಬು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version